ಮಂಗಳೂರು: ಅಪರಿಚಿತ ವ್ಯಕ್ತಿ ಮೃತ್ಯು
Update: 2019-07-12 22:07 IST
ಮಂಗಳೂರು, ಜು.12: ಹಂಪನಕಟ್ಟೆ ಹೊಟೇಲ್‌ವೊಂದರ ಮುಂಭಾಗ ಬಿದ್ದು ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
60 ವರ್ಷ ಪ್ರಾಯದ ವ್ಯಕ್ತಿಯೋರ್ವ ಜೂ.28ರಂದು ಹಂಪನಕಟ್ಟೆ ರಸ್ತೆ ದಾಟಿ ಹೊಟೇಲ್ ಮುಂಭಾಗದ ಗೇಟ್ ಬಳಿ ಬಿದ್ದು ಗಾಯಗೊಂಡಿದ್ದ. ಆತನನ್ನು ಅಲ್ಲಿನ ಹೊಟೇಲ್ ಮಾಲಕರು ಆ್ಯಂಬುಲೆನ್ಸ್ ಮೂಲಕ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಗಾಯಾಳು ಜು.11ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಚಹರೆ: 5.6 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ, ಮೂರು ಇಂಚು ಕಪ್ಪು-ಬಿಳಿ ಮಿಶ್ರಿತ ಗಡ್ಡ, ಎರಡು ಇಂಚಿನಷ್ಟು ಕಪ್ಪು-ಬಿಳಿ ಮಿಶ್ರಿತ ಕೂದಲು, ದೇಹದ ಎಡ ಎದೆಯ ಮೇಲೆ ಚಿಕ್ಕದಾಗಿ ಕಪ್ಪು ಎಳ್ಳು ಮಚ್ಚೆ ಇರುತ್ತದೆ.
ಈ ಚಹರೆಯುಳ್ಳ ಮೃತರ ವಾರಸುದಾರರು ಇದ್ದಲ್ಲಿ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆ (0824- 2220516)ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.