ಉಡುಪಿ ಶ್ರೀಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ

Update: 2019-07-12 16:39 GMT

ಉಡುಪಿ, ಜು.12: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯ ತೀರ್ಥರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥರು ಆಗಮಿಸಿದ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.

ಇದೇ ಸಂದರ್ಭದಲ್ಲಿ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥರು ರಥಬೀದಿಯಲ್ಲಿರುವ ಅದಮಾರು ಮಠದಲ್ಲಿ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.

ಮಹಾವಿಷ್ಣುವಿನ ಚಿಹ್ನೆಗಳಾದ ಚಕ್ರ ಹಾಗೂ ಶಂಖವನ್ನು ಪಂಚಗವ್ಯ ಪ್ರಾಶನ ಪೂರ್ವಕವಾಗಿ ಸುದರ್ಶನ ಹೋಮಕುಂಡದ ಕೆಂಡದಲ್ಲಿ ಕಾಯಿಸಿ ಅದನ್ನು ಶರೀರದ ಕೈ, ಎದೆ, ಹೊಟ್ಟೆ ಭಾಗಗಳಿಗೆ ಧಾರಣೆ ಮಾಡಿಕೊಳ್ಳುವುದೇ ತಪ್ತ ಮುದ್ರಾಧಾರಣೆ.

ಹಿರಿಯ ಯತಿಗಳು ಸ್ವಯಂ ಮುದ್ರಾಧಾರಣೆ ಮಾಡಿಕೊಂಡರೆ, ಹಿರಿಯರು ಕಿರಿಯ ಯತಿಗಳಿಗೆ ಮುದ್ರಾ ಧಾರಣೆ ಮಾಡುವರು. ಬಳಿಕ ಹಿರಿಯ, ಕಿರಿಯ ಯತಿಗಳು ಸೇರಿ ಮಠಕ್ಕೆ ಬಂದ ಎಲ್ಲಾ ಭಕ್ತರನ್ನು ಸರದಿ ಸಾಲಿಲ್ಲಿ ಮುದ್ರಾ ಧಾರಣೆ ಮಾಡುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News