ಕೀಲಿಂಜೆ ಪರಿಸರದಲ್ಲಿ ಮತ್ತೆ ಕಾಡುಕೋಣಗಳ ಹಾವಳಿ

Update: 2019-07-12 16:40 GMT

ಉಡುಪಿ, ಜು.12: ಹಾವಂಜೆ ಗ್ರಾಮದ ಕೀಳಿಂಜೆ ಎಂಬಲ್ಲಿ ಕಾಡುಕೋಣ ಗಳು ಮತ್ತೆ ಕೃಷಿಕರ ಗದ್ದೆಗಳಿಗೆ ಪ್ರವೇಶ ಮಾಡುತಿದ್ದು ಕೃಷಿಕರು ನೆಟ್ಟ ಪೈರು ಹಾಗೂ ತರಕಾರಿಗಳನ್ನು ತಿಂದು ಬೆಳೆಹಾನಿ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

ಈ ಕಾಡುಕೋಣಗಳನ್ನು ಮತ್ತೆ ಕಾಡಿಗೆ ಅಟ್ಟುವ ಪ್ರಯತ್ನವನ್ನು ಸಂಬಂಧಪಟ್ಟ ಅರಣ್ಯ ಇಲಾಖೆಯವರು ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗದೆ.  ಮಳೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ರೈತರು ಈಗಾಗಲೇ ಹೈರಾಣಾಗಿದ್ದಾರೆ. ಇನ್ನು ಅವರ ಸಮಸ್ಯೆಗಳ ಸರಣಿಗೆ ಇದೀಗ ಕಾಡುಕೋಣ ಗಳು ಸೇರಿದಂತೆ ವಿವಿಧ ಕಾಡುಪ್ರಾಣಿಗಳ ಹಾವಳಿಯೂ ಸೇರಿಕೊಂಡಿದೆ.

ಇವುಗಳಿಂದ ರೈತರ ಫಸಲುಗಳು ಹಾಳಾಗುವ ಮುನ್ನ ಕಾಡುಕೋಣವನ್ನು ಕಾಡಿಗೆ ಕಳುಹಿಸುವ ವ್ಯವಸ್ಥೆಯನ್ನು ಇಲಾಖೆಗಳು ಮಾಡಬೇಕೆಂದು ಕಾಂಗ್ರೆಸ್ ಮುಖಂಡರಾದ ಜಯ ಶೆಟ್ಟಿಬನ್ನಂಜೆ, ಸುಧಾಕರ ಪೂಜಾರಿ, ಗಣೇಶ್ ಶೆಟ್ಟಿ ಕೀಳಿಂಜೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News