×
Ad

​ಯುವಕನ ಅಪಹರಿಸಿ ಕೊಲೆಗೆ ಯತ್ನ

Update: 2019-07-12 22:21 IST

ಮಣಿಪಾಲ, ಜು.12: ತಂಡವೊಂದು ಯುವಕನನ್ನು ಅಪಹರಿಸಿ ಕೊಲೆಗೆ ಯತ್ನಿಸಿರುವ ಘಟನೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಜು.11ರಂದು ರಾತ್ರಿ 10.15ರ ಸುಮಾರಿಗೆ ನಡೆದಿದೆ.

ಹಲ್ಲೆಗೆ ಒಳಗಾದವರನ್ನು ಮಣಿಪಾಲ ವಿ.ಪಿ.ನಗರದ ಮಹಾನ್ ರಾವ್ (25) ಎಂದು ಗುರುತಿಸಲಾಗಿದೆ. ಇವರು ತನ್ನ ಸ್ನೇಹಿತರೊಂದಿಗೆ ಮಾತನಾ ಡುತ್ತಿದ್ದಾಗ ಎರಡು ಕಾರಿನಲ್ಲಿ ನಿಶು ಕರ್ಕಡ, ನಿಶಾಂತ್, ವಾದಿ, ಗುರು, ರಾಜೇಶ್, ರಕ್ಷಿತ್, ವಿಶ್ವನಾಥ ಶೆಟ್ಟಿ ಹಾಗೂ ಇತರ ಇಬ್ಬರು ಬಂದಿದ್ದು, ತಂಡ ರಾಡ್‌ನಿಂದ ಮಹಾನ್ ರಾವ್ಗೆ ಮಾರಣಾಂತಿವಾಗಿ ಹಲ್ಲೆ ನಡೆಸಿದೆ.

ಬಳಿಕ ತಂಡ ಮಹಾನ್ ರಾವ್‌ರನ್ನು ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News