ಜು.14: ನಿರ್ಮಿಲ್ಲೆಂ ನಿರ್ಮೋಣೆಂ ಕೊಂಕಣಿ ಚಲನ ಚಿತ್ರದ ಧ್ವನಿ ಸುರುಳಿ ಬಿಡುಗಡೆ

Update: 2019-07-13 07:37 GMT

ಮಂಗಳೂರು, ಜು.13: ಪ್ರೇಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹೆನ್ರಿ ಡಿಸಿಲ್ವಾ ಸುರತ್ಕಲ್ ನಿರ್ಮಿಸಿರುವ ‘ನಿರ್ಮಿಲ್ಲೆಂ ನಿರ್ಮೋಣೆಂ’ ಕೊಂಕಣಿ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಜು.14ರಂದು ಸಂಜೆ 6 ಗಂಟೆಗೆ ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಮಿನಿ ಹಾಲ್‌ನಲ್ಲಿ ನಡೆಯಲಿದೆ ಎಂದು ಚಲನಚಿತ್ರದ ನಿರ್ದೇಶಕ ಮೆಲ್ವಿನ್ ಎಲ್ಪೇಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅನಾಥ ಮಗುವನ್ನು ಚರ್ಚ್‌ನ ಫಾದರ್ ಸಾಕಿ ದೊಡ್ಡವರನ್ನಾಗಿ ಮಾಡಿ ಆ ಹುಡುಗ ಪ್ರೀತಿ-ಪ್ರೇಮ ಎಂದು ಹೇಳಿ ಫಾದರ್ ವಿರುದ್ಧ ಹಾಗೂ ದೇವರ ವಿರುದ್ಧ ಹೋಗಿ ಏನೆಲ್ಲಾ ಮಾಡುತ್ತಾನೆ. ಕೊನೆಯಲ್ಲಿ ಆತನ ಜೀವನದಲ್ಲಿ ಏನಾಗುತ್ತದೆ. ಹಿಂದಿರುಗಿ ಫಾದರ್ ಕಡೆಗೆ ಬರುತ್ತಾನೋ ಇಲ್ಲವೋ ಎಂಬ ಕುತೂಹಲಕಾರಿ ವಿಚಾರಗಳನ್ನು ಒಳಗೊಂಡಿರುವ ಈ ಸಿನೆಮಾ ಸಮಾಜಕ್ಕೆ ಸಂದೇಶ ನೀಡುತ್ತದೆ. ಸಿನೆಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಸಂಗೀತ ಜನಮನದಲ್ಲಿ ಉಳಿಯುವುದು ಖಚಿತ ಎಂದು ಅವರು ಹೇಳಿದರು.

ಸಿನೆಮಾದ ಕತೆ ಮತ್ತು ನಿರ್ಮಾಣ ಹೆನ್ರಿ ಡಿ ಸಿಲ್ವಾ, ಚಿತ್ರಕತೆ ಮತ್ತು ಸಹ ನಿರ್ದೇಶನ ನೋರ್ಬಟ್ ಜೋನ್ ಡಿಸೋಜ ಮಾಡಿದ್ದು, ಯೂಟರ್ನ್ ಸಿನೆಮಾದಲ್ಲಿ ಸಂಕಲನ ಮಾಡಿದ್ದ ಚಂದು ಉಪ್ಪಲ್ಪಳ್ಳಿ ಈ ಸಿನೆಮಾದ ಸಂಕಲನ ಮಾಡಿದ್ದಾರೆ.

ಮಂಜುನಾಥ್ ಛಾಯಾಗ್ರಾಹಣ ಮಾಡಿದ್ದಾರೆ. ಬಪ್ಪನ್ ಜೋಸ್ಸಿನ್ ಸಂಗೀತ ನೀಡಿದ್ದು, ದಿ. ವಿಲ್ಪಿ ರೆಬಿಂಬಸ್ ಸಾಹಿತ್ಯ ಒದಗಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಿನೆಮಾ ತೆರೆಕಾಣಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನೋರ್ಬಟ್ ಜೋನ್ ಡಿಸೋಜ, ನಟ ಪ್ರತಾಪ್ ಮಿನೇಜಸ್, ಪೋಷಕ ನಟಿ ಹೇರಾ ಪಿಂಟೊ, ಹೆನ್ರಿ ಡಿಸಿಲ್ವಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News