ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಮಂಗಳೂರಿನ ಶ್ರೀಯಾನಾ ಮಲ್ಯ
Update: 2019-07-13 13:14 IST
ಮಂಗಳೂರು, ಜು.13: ನಗರದ ಬಾಲಪ್ರತಿಭೆ, ಚೆಸ್ ಕ್ರೀಡಾಳು ಶ್ರೀಯಾನಾ ಎಸ್. ಮಲ್ಯ(9) ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್‌ಶಿಪ್ 2019ರ 9ರ ವಯೋಮಿತಿಗಿಂತ ಕೆಳಗಿನ ಹರೆಯದವರ ಚೆಸ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್- 2019ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಗಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಅಸೋಸಿಯೇಶನ್ ಮತ್ತು ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಜೂನ್ 28ರಿಂದ ಜೂನ್ 30ರವರೆಗೆ ಬೆಂಗಳೂರಿನ ನೃಪತುಂಗ ರಸ್ತೆಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಇರುವ ವೈಎಂಸಿಎ ಸಭಾಂಗಣದಲ್ಲಿ ಈ ಪ್ರತಿಷ್ಠಿತ ಸ್ಪರ್ಧೆ ಆಯೋಜಿಸಿತ್ತು.
ಸ್ಪರ್ಧೆಯಲ್ಲಿ ಒಟ್ಟು 92 ಬಾಲಕಿಯರು ಪಾಲ್ಗೊಂಡಿದ್ದು, ಶ್ರೀಯಾನಾ ಪ್ರಥಮ 9 ಸುತ್ತುಗಳಲ್ಲಿ 9ರಲ್ಲೂ ವಿಜೇತರಾಗಿದ್ದರು.
ಮಂಗಳೂರಿನ ಉರ್ವಾದ ಸಂದೀಪ್ ಮತ್ತು ನಂದಿನಿ ದಂಪತಿ ಪುತ್ರಿಯಾಗಿರುವ ಶ್ರೀಯಾನಾ, ಬಿಜೈ ಲೂರ್ಡ್ಸ್ ಸೆಂಟ್ರಲ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ.