ಪುತ್ತೂರು: ಯುವಜನ ಪರಿಷತ್ ಸಭೆ
ವಿಟ್ಲ, ಜು.13: ದ.ಕ. ಜಿಲ್ಲಾ ಯುವಜನ ಪರಿಷತ್ ಮಾಸಿಕ ಸಭೆಯು ಕೋಶಾಧಿಕಾರಿ ಹಾಜಿ ಶಾಕಿರ್ ಅಡ್ವೊಕೇಟ್ ಮನೆಯಲ್ಲಿ ಹಾಜಿ ಅಶ್ರಫ್ ಕಲ್ಲೆಗ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕೂಲಂಕುಷವಾಗಿ ನಡೆಸಿ ಅಪರಾಧಿಗೆ ಕಠಿಣ ಶಿಕ್ಷೆಗೊಳಪಡಿಸುವಂತೆ ಒಕ್ಕೊರಲಿನಿಂದ ಅಗ್ರಹಿಸಲಾಯಿತು.
ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಸಮಿತಿಯ ಜೊತೆ ಕಾರ್ಯದರ್ಶಿ ನೌಷಾದ್ ಅವರನ್ನು ಹಾರೈಸಿ ಬೀಳ್ಕೊಡಲಾಯಿತು.
ಸಭೆಯಲ್ಲಿ ರಾಜ್ಯ ಸಂಚಾಲಕರಾದ ನೋಟರಿ ಎಂ.ಪಿ.ಅಬೂಬಕರ್, ಜಿಲ್ಲಾ ಸಂಚಾಲಕರ ಖಾಸಿಂ ಹಾಜಿ, ನೋಟರಿ ನೂರುದ್ದೀನ್ ಸಾಲ್ಮರ, ಉಪಾಧ್ಯಕ್ಷ ಹಾಕಿ ಇಬ್ರಾಹೀಂ ಸಾಗರ್, ಪ್ರಧಾನ ಕಾರ್ಯದರ್ಶಿ ಶರೀಫ್ ಸಾಲ್ಮರ, ಕೋಶಾಧಿಕಾರಿ ಶಾಕಿರ್ ಹಾಜಿ ಹಾಗೂ ಹಮೀದ್ ಕಾರ್ಜಲ್, ಪುತ್ತು ಶೇಟ್, ಅಶ್ರಫ್ ಮುಕ್ವೆ, ಹಮೀದ್ ಮೌಲಾ ಕಬಕ, ಉನೈಸ್ ಮಿತ್ತೂರು, ಹಸೈನಾರ್ ಬನಾರಿ, ಇಬ್ರಾಹೀಂ ಬಾತಿಶ ಸಾಲ್ಮರ, ಅಬ್ದುಲ್ ಮುತ್ತಲಿಬ್ ಕುವೈತ್, ಅಬ್ದುಲ್ ಹಮೀದ್ ಅಮ್ಮಿ ಬಾಂಬೆ, ರಶೀದ್ ಮುರ, ನೌಷಾದ್ ಅಮಾನ್ ಮೊದಲಾದವರು ಹಾಜರಿದ್ದರು
ಕಾರ್ಯದರ್ಶಿ ಸಲಿಮ್ ಮುರ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಪಡೀಲ್ ಕಾರ್ಯಕ್ರಮ ನಿರೂಪಿಸಿದರು.