×
Ad

ಯಡಮೊಗೆಯಲ್ಲಿ ಮಗು ಸಾವು ಪ್ರಕರಣ: ತಾಯಿ ವಿರುದ್ಧ ಕೊಲೆ ಪ್ರಕರಣ ದಾಖಲು

Update: 2019-07-13 15:04 IST

ಉಡುಪಿ, ಜು.13: ಯಡಮೊಗೆ ಹೊಳೆಗೆ ಹಾರಿ ಆತ್ಯಹತ್ಯೆಗೆ ಯತ್ನಿಸುವ ಮೂಲಕ ತನ್ನ ಮಗುವಿನ ಸಾವಿಗೆ ಕಾರಣರಾದ ತಾಯಿ ರೇಖಾ ನಾಯ್ಕ್ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಇದೀಗ ಕೊಲೆ ಪ್ರಕರಣ ದಾಖಲಾಗಿದೆ.

ವಿಚಾರಣೆ ಸಂದರ್ಭ ರೇಖಾ ನಾಯ್ಕ್ ಗೆ ಮನೋವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಿದ್ದು, ವೈದ್ಯರು ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಗಾಗಿ ಆಕೆಯನ್ನು ಇಂದು ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.

ರೇಖಾ ನೀಡಿದ ಹೇಳಿಕೆಯಂತೆ ಕಲಂ 302 (ಕೊಲೆ), ಕಲಂ 307 (ಕೊಲೆಯತ್ನ) ಹಾಗೂ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದ ಸಮಗ್ರವಾದ ತನಿಖೆಯನ್ನು ರೇಖಾಳ ಚಿಕಿತ್ಸೆ ಮುಗಿಸಿ ಆಕೆ ಮಾನಸಿಕ ಖಿನ್ನತೆಯಿಂದ ಹೊರಬಂದು ಸಂಪೂರ್ಣ ಗುಣಮುಖರಾದ ಬಳಿಕ ಮುಂದುವರಿಸಲಾಗುವುದು ಎಂದು ಉಡುಪಿ ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News