×
Ad

ತುಳುನಾಡಿನ ಸಂಸ್ಕೃತಿ ಇಡೀ ದೇಶದಲ್ಲೇ ವಿಶಿಷ್ಟವಾದುದು: ತುಳಸಿ ದೇವಾಡಿಗ

Update: 2019-07-13 20:43 IST

ಉಡುಪಿ, ಜು.13: ದೇಶದ ಯಾವುದೇ ರಾಜ್ಯಗಳಲ್ಲಿ ಇಲ್ಲದ ವಿಶಿಷ್ಟ ಸಂಸ್ಕೃತಿ ತುಳುನಾಡಿನಲ್ಲಿ ಇದೆ. ಆದರೆ ಈ ವಿಶಿಷ್ಟ ಸಂಸ್ಕೃತಿಯನ್ನು ನಾವು ಮರೆತು ಹಾಳು ಮಾಡುತ್ತಿದ್ದೇವೆ ಎಂದು ನಿವೃತ್ತ ಸೈನಿಕ ಶಿಕ್ಷಕಿ ತುಳಸಿ ದೇವಾಡಿಗ ಕಟಪಾಡಿ ಖೇಧ ವ್ಯಕ್ತಪಡಿಸಿದ್ದಾರೆ.

ಉಡುಪಿ ತುಳುಕೂಟದ ವತಿಯಿಂದ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ‘ಮದರೆಂಗಿದ ರಂಗ್’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತುಳುನಾಡಿನ ಹಿಂದಿನ ಸಂಸ್ಕೃತಿಗೂ ಈಗಿನ ಸಂಸ್ಕೃತಿಗೂ ಬಹಳಷ್ಟು ವ್ಯತ್ಯಾಸ ಗಳಿವೆ. ತುಳುನಾಡಿನ ಆಟ, ತಿಂಡಿ ತಿನಿಸುಗಳನ್ನು ನಾವು ದೂರ ಮಾಡುತ್ತಿ ದ್ದೇವೆ. ಈ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು. ತುಳು ಭಾಷೆಯನ್ನು ಕೂಡ ಮರೆಯದೆ ತಮ್ಮ ಮಕ್ಕಳಿಗೆ ಕಲಿಸುವ ಕಾರ್ಯ ಮಾಡಬೇಕು ಎಂದರು.

ಉಡುಪಿ ಧರ್ಮಪ್ರಾಂತದ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾನೆಟ್ ಬರ್ಬೋಜಾ, ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಸಹ ಸಂಪಾದಕಿ ಕುಲ್‌ಸೂಮ್ ಅಬೂಬಕ್ಕರ್ ಹಾಗೂ ಮದರೆಂಗಿಯ ಬಗ್ಗೆ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ.ಎನ್. ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್ ಭಾಗ ವಹಿಸಿದ್ದರು. ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ವಹಿಸಿದ್ದರು.
 

ತುಳುಕೂಟದ ಉಪಾಧ್ಯಕ್ಷ ಮುಹ್ಮಮದ್ ವೌಲಾ, ಲಕ್ಷ್ಮೀಕಾಂತ್ ಹೆಸ್ಕೂರ್, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕಿ ಜ್ಯೋತಿ ಎಸ್.ದೇವಾಡಿಗ ಸ್ವಾಗತಿಸಿದರು. ಯಶೋದಾ ೇಶವ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸ ಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News