ಜಲನೀತಿ ಹೊಂದಿದ ಮೊದಲ ರಾಜ್ಯ ಮೇಘಾಲಯ

Update: 2019-07-13 16:39 GMT

ಶಿಲ್ಲಾಂಗ್,ಜು.13: ನೀರಿನ ಬಳಕೆ ಮತ್ತು ಜಲಮೂಲಗಳ ಸಂರಕ್ಷಣೆ ಕುರಿತು ಕರಡನ್ನು ರಾಜ್ಯ ಸಂಪುಟವು ಶುಕ್ರವಾರ ಅಂಗೀಕರಿಸಿದ್ದು,ಇದರೊಂದಿಗೆ ಮೇಘಾಲಯವು ಜಲನೀತಿಯನ್ನು ಹೊಂದಿದ ದೇಶದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಳೆ ನೀರನ್ನು ಹಿಡಿದಿರಿಸಲು ಚೆಕ್ ಡ್ಯಾಮ್‌ಗಳ ನಿರ್ಮಾಣ,ಮಳೆನೀರು ಕೊಯ್ಲು ವ್ಯವಸ್ಥೆಗಳು,ಅಂತರ್ಜಲದ ಅಸಮರ್ಪಕ ಬಳಕೆಗೆ ಕಡಿವಾಣ ಮತ್ತು ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಇವೇ ಮೊದಲಾದ ಕ್ರಮಗಳನ್ನು ನೂತನ ನೀತಿಯು ಒಳಗೊಂಡಿದೆ.

ಮೇಘಾಲಯವು ತನ್ನದೇ ಆದ ಜಲನೀತಿಯನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಗಿದೆ. ಪಾಲುದಾರರೊಡನೆ ಸಮಾಲೋಚನೆಯ ಬಳಿಕ ಈ ನೀತಿಯನ್ನು ರೂಪಿಸಲಾಗಿದೆ ಮತ್ತು ಶೀಘ್ರವೇ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಪ್ರಿಸ್ಟೋನ್ ಟಿನ್ಸಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಗುಡ್ಡಗಾಡು ಪ್ರದೇಶವಾಗಿರುವ ಮೇಘಾಲಯದಲ್ಲಿ ವಿಫುಲ ಮಳೆಯಾಗುತ್ತದೆ,ಆದರೆ ನೀರನ್ನು ಉಳಿಸಿಕೊಳ್ಳಲಾಗುತ್ತಿಲ್ಲ ಮತ್ತು ಅದು ಕೆಲವೇ ಗಂಟೆಗಳಲ್ಲಿ ಬಾಂಗ್ಲಾದೇಶವನ್ನು ಸೇರುತ್ತದೆ. ಹೀಗಾಗಿ ಮಳೆನೀರನ್ನು ಬಳಸಿಕೊಳ್ಳಲು ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಗಡಿಗಳಲ್ಲಿ ಚೆಕ್ ಡ್ಯಾಮ್‌ಗಳ ನಿರ್ಮಾಣ ಅಗತ್ಯವಾಗಿದೆ. ಇವುಗಳನ್ನು ಬಹುಉದ್ದೇಶದ ಜಲಾಶಯಗಳನ್ನಾಗಿ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News