×
Ad

ಮಂಗಳೂರು: ತಾಜ್ ಮಹಲ್ ಹೋಟೆಲ್ ಮಾಲಕ ಮಾಧವ ಶೆಣೈ ನಿಧನ

Update: 2019-07-14 11:14 IST

ಮಂಗಳೂರು: ನಗರದ ಪ್ರತಿಷ್ಠಿತ ತಾಜ್ ಮಹಲ್ ಹೋಟೆಲ್ ಮಾಲಕ, ಪಾಂಡೇಶ್ವರ ನಿವಾಸಿ ಕುಡ್ಪಿ ಮಾಧವ ಶೆಣೈ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಕಳೆದ 60 ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಹಂಪನಕಟ್ಟೆ ಮತ್ತು ಕೊಡಿಯಾಲ್ ಬೈಲ್ ನಲ್ಲಿ ಇವರ ಎರಡು ಹೋಟೆಲ್ ಗಳು ಕಾರ್ಯಾಚರಿಸುತ್ತಿವೆ.

ಅವರು ಜಿಎಸ್'ಬಿ ಸಮಾಜದ ಮುಖಂಡರಾಗಿದ್ದು, ಕೊಂಚಾಡಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರವು ರವಿವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News