ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ 12, 13ನೇ ಮನೆ ಹಸ್ತಾಂತರ
Update: 2019-07-14 13:14 IST
ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ 'ಪ್ರಾಜೆಕ್ಟ್ ಆಶಿಯಾನ' ವತಿಯಿಂದ ವರ್ಷಕ್ಕೆ10 ಮನೆಗಳನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದು, ಬಡ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡಲಾಗುತ್ತಿದೆ. ಈ ಯೋಜನೆಯ ಅಂಗವಾಗಿ 12ನೆ ಮತ್ತು 13ನೆಯ ಮನೆಗಳನ್ನು ಪಜೀರ್ ಹಾಗೂ ನಾಟೆಕಲ್ ಬಳಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಸ್ಜಿದುಲ್ ಇಹ್ಸಾನ್ ಖತೀಬ್ ಮೌಲಾನಾ ತಯ್ಯಿಬ್, ಪಜೀರ್ ರಹ್ಮಾನಿಯ ಜುಮಾ ಮಸೀದಿಯ ಖತೀಬ್ ಮೌಲಾನಾ ಇಬ್ರಾಹಿಂ ದಾರಿಮಿ, ಮೌಲಾನಾ ಅಲ್ತಾಫ್ ಹುಸೈನ್, ರಹ್ಮಾನಿಯ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಎಚ್.ಐ.ಎಫ್ ಅಧ್ಯಕ್ಷ ಸಾಜಿದ್ ಎ.ಕೆ., ಪ್ರೊಜೆಕ್ಟ್ ಆಶಿಯಾನದ ಸಂಚಾಲಕ ನಾಝಿಮ್ ಎ.ಕೆ., ಮರಿಯಮ್ ಎ.ಕೆ., ಹಫ್ಸಾ ಅಹ್ಮದ್ ಉಪಸ್ಥಿತರಿದ್ದರು.
ನಾಝಿಮ್ ಎಸ್ಎಸ್ ಹಾಗೂ ಬಿಲಾಲ್ ರೈಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.