×
Ad

ಸುಳ್ಯ: ಬಸ್ - ಕಾರು ನಡುವೆ ಅಪಘಾತ; ಮಹಿಳೆ ಸೇರಿ ಮೂವರು ಮೃತ್ಯು

Update: 2019-07-14 13:29 IST

ಮಂಗಳೂರು: ಸುಳ್ಯ ಸಮೀಪದ ಅರಂಬೂರಿನಲ್ಲಿ ರವಿವಾರ ಬೆಳಗ್ಗೆ ಕಾರು ಹಾಗೂ ಬಸ್ಸು ಢಿಕ್ಕಿಯಾಗಿ 3 ಮಂದಿ ಸಾವನ್ನಪ್ಪಿದ್ದಾರೆ.

ಸುಳ್ಯದ ಅರಂಬೂರು ಬಳಿ ರಿಕ್ಷಾವನ್ನು ಹಿಂದಿಕ್ಕುವ  ಯತ್ನದಲ್ಲಿದ್ದ ಕಾರು ಹಾಗೂ ಬಸ್ಸು ಢಿಕ್ಕಿಯಾಗಿದೆ. ಕಾರಿನಲ್ಲಿದ್ದ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೋಲೂರು ಮುದುಗೆರೆ ನಿವಾಸಿ ಮಂಜುಳಾ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟರು. ಗಂಭೀರ ಗಾಯಗೊಂಡಿದ್ದ ಸೋಮಣ್ಣ ಮತ್ತು ನಾಗೇಂದ್ರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ಸು ಹಾಗೂ  ರಾಮನಗರದಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಢಿಕ್ಕಿಯಾಗಿದೆ. ಮೃತರೆಲ್ಲರೂ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೋಲೂರು ಮುದುಗೆರೆಯವರು ಎಂದು ಗುರುತಿಸಲಾಗಿದೆ.

ಕಾರಿನಲ್ಲಿ  12 ವರ್ಷ ಪ್ರಾಯದ ತನ್ಮಯಿ ಹಾಗೂ ಇನ್ನೊಬ್ಬ ಮಹಿಳೆ ಜಯಶೀಲ ಅವರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News