ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ : ಪಿಟಿಎ ಅಧ್ಯಕ್ಷರಾಗಿ ಹಮೀದ್ ಅಲಿ ಪುನರಾಯ್ಕೆ

Update: 2019-07-14 11:33 GMT
ಹಮೀದ್ ಅಲಿ 

ವಿಟ್ಲ : ಗೋಳ್ತಮಜಲು ಜೆಮ್ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕ - ರಕ್ಷಕ ಸಂಘದ 2019-20 ನೇ ಸಾಲಿನ ಅಧ್ಯಕ್ಷರಾಗಿ ಹಮೀದ್ ಅಲಿ ಗೋಳ್ತಮಜಲು ಪುನರಾಯ್ಕೆಗೊಂಡಿದ್ದಾರೆ.

ಶನಿವಾರ ಶಾಲೆಯಲ್ಲಿ ನಡೆದ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಪುಷ್ಪ ಗೋಳ್ತಮಜಲು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ  ಪಿ.ಎಸ್. ಕೃಷ್ಣಮೋಹನ್ ಅವರು ಮಾತನಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ದಿಯಲ್ಲಿ ಶಿಕ್ಷಕರು ಹಾಗೂ ರಕ್ಷಕರ ಪಾತ್ರವು ಸಮಾನ ಹಾಗೂ ಮಹತ್ವಪೂರ್ಣವಾಗಿದೆ ಎಂದರು.

ಫಾತಿಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ವ್ಯವಸ್ಥಾಪಕ ಹಾಜಿ ಜಿ. ಮಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಹಾಜಿ  ಅಹ್ಮದ್ ಮುಸ್ತಫಾ, ಪಿಟಿಎ ಅಧ್ಯಕ್ಷರಾದ ಹಮೀದ್ ಅಲಿ,  ಶಾಲಾ ಮುಖ್ಯೋಪಾಧ್ಯಾಯ ನಿರಂಜನ್ ಡಿ. ಪ್ರಮುಖರಾದ ಹಮೀದ್ ಗೋಳ್ತಮಜಲು, ಡಿ.ಕೆ ಇಬ್ರಾಹಿಂ ಉಪಸ್ಥಿತರಿದ್ದರು. ಶಿಕ್ಷಕರುಗಳಾದ ಮಹಮ್ಮದ್ ರಫೀಕ್ ಸ್ವಾಗತಿಸಿ,  ಮೆಹನಾಝ ವಂದಿಸಿದರು.

ಪಲ್ಲವಿ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News