×
Ad

ಭಾರತ್ ಬೀಡಿ ನಿರ್ದೇಶಕ ಅನಂತ್ ಪೈ ನಿಧನ

Update: 2019-07-14 17:50 IST

ಮಂಗಳೂರು, ಜು.14: ಭಾರತ್ ಬೀಡಿ ವರ್ಕ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಜಿ ಪೈ ರವಿವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಿಧನರಾದರು.

ಸೆಮಿನಾರ್‌ನಲ್ಲಿ ಭಾಗವಹಿಸಲು ಇಂದೋರ್‌ಗೆ ಹೋಗಿದ್ದ ಅನಂತ್ ಪೈ ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಅನಂತ್ ಜಿ. ಪೈ ಭಾರತ್ ಬೀಡಿ ಸಂಸ್ಥೆಯ ಸಂಸ್ಥಾಪಕ ದಿವಂಗತ ಬಿ.ಮಂಜುನಾಥ ಪೈ ಅವರ ಹಿರಿಯ ಪುತ್ರರಾಗಿರುವ ದಿವಂಗತ ಗಣಪತಿ ಪೈ - ಗೀತಾ ಪೈ ದಂಪತಿಯ ಪುತ್ರ.

1954 ಹುಟ್ಟಿದ 30 ಬ್ರ್ಯಾಂಡ್ ಬೀಡಿಗಳ ತಯಾರಿಕಾ ಸಂಸ್ಥೆಯಾಗಿ ಭಾರತ್ ಬೀಡಿ ವರ್ಕ್ಸ್ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದು ಮುಂದೆ ಇದು ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿ, ಭಾರತ್ ಎಕ್ಸ್‌ಪೋರ್ಟ್ಸ್, ಭಾರತ್ ಬಿಲ್ಡರ್ಸ್, ಭಾರತ್ ಪ್ರಿಂಟರ್ಸ್, ಭಾರತ್ ಗ್ರೂಪ್ ಕಂಪನೀಸ್, ಅಲಕನಂದಾ ಪ್ರಿಂಟರ್ಸ್, ಭರತ್ ಆಟೋ ಕಾರ್ಸ್, ಭಾರತ್ ಮಾಲ್, ಭಾರತ್ ಬುಕ್ ಮಾರ್ಕ್ ತನ್ನ ಉದ್ಯಮವನ್ನು ವಿಸ್ತರಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News