×
Ad

ರಸ್ತೆ ಅಪಘಾತ: ಸಲಫಿ ವಿದ್ವಾಂಸ ಝಕರಿಯ ಸ್ವಲಾಹಿ ಮೃತ್ಯು

Update: 2019-07-14 19:15 IST

ಕಣ್ಣೂರು : ಸಲಫಿ ವಿದ್ವಾಂಸ, ಖ್ಯಾತ ಭಾಷಣಗಾರ ಪಾಲಕ್ಕಾಡ್ ಜಿಲ್ಲೆಯ ಎಡತ್ತನಾಟ್ಕರ ನಿವಾಸಿ ಝಕರಿಯ ಸ್ವಲಾಹಿ (54) ಅವರು ಕಣ್ಣೂರು ಜಿಲ್ಲೆಯ ಕೂತ್ತುಪರಂಬ ಎಂಬಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬಸ್ ಹಾಗು ಸ್ಕೂಟರ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಿಂದ ಗಂಭೀರ ಗಾಯಗೊಂಡ ಅವರನ್ನು ಇಲ್ಲಿನ ತಲಾಶೇರಿಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಎಡವಣ್ಣ ಜಾಮಿಯಾ ನದ್ವಿಯಾದಿಂದ ಪದವಿ ಪಡೆದ ಅವರು ಅಲಿಘಡ್ ಮುಸ್ಲಿ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಕ್ಯಾಲಿಕಟ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಹಿಂದೆ ಸೌದಿ ಅರೇಬಿಯಾದಲ್ಲಿ ಇದ್ದ ಅವರು ಕೆಲವು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News