×
Ad

ಬಜ್ಪೆ: ಮಾರಕಾಯುಧ ತೋರಿಸಿ ಲಕ್ಷಾಂತರ ರೂ. ದರೋಡೆ

Update: 2019-07-14 20:16 IST

ಮಂಗಳೂರು : ಮಾರಕಾಯುಧಗಳನ್ನು ಹಿಡಿದುಕೊಂಡು ಬೆದರಿಕೆ ಹಾಕಿದ ದರೋಡೆಕೋರರು, ಖಾಸಗಿ ಫೈನಾನ್ಸರ್ ಒಬ್ಬರಿಂದ ಸುಮಾರು 2 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ನಗರದ ಬಜ್ಪೆ ಸಮೀಪದ ಮಳಲಿ ಎಂಬಲ್ಲಿ ರವಿವಾರ ನಡೆದಿದೆ.

ನಾಗುರಿ ನಿವಾಸಿ ಸೆಂಥಿಲ್‌ ಕುಮಾರ್ ದರೋಡೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಸೆಂಥಿಲ್‌ ಕುಮಾರ್ ಫೈನಾನ್ಸ್ ಹಣ ಸಂಗ್ರಹಕ್ಕೆ ತೆರಳಿದ್ದರು. ಈ ವೇಳೆ ದರೋಡೆಕೋರರ ತಂಡ ಕೃತ್ಯ ನಡೆಸಿದೆ. ಸೆಂಥಿಲ್ ಅವರಲ್ಲಿದ್ದ ಸುಮಾರು 2 ಲಕ್ಷ ರೂ. ನಗದು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News