×
Ad

ಮಹಿಳೆಯರು ಸ್ವಾವಲಂಬಿಗಳಾಗಲಿ: ಡಾ.ನಿಕೇತನ

Update: 2019-07-14 20:26 IST

ಉಡುಪಿ, ಜು.14: ಮಹಿಳೆಯರು ಸ್ವಾವಲಂಬಿಗಳಾಗಿ ಇತರರಿಗೆ ನೀಡುವ ಕೈಗಳಾಗಬೇಕು. ಸಂಘಟನೆಗಳು ದುಡಿಯುವ ಕೈಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಿಕೇತನ ಹೇಳಿದ್ದಾರೆ.

ಉಡುಪಿಯ ಅಜ್ಜರಕಾಡು ಮಹಿಳಾ ಸಮಾಜದಲ್ಲಿ ರವಿವಾರ ಸಾಫಲ್ಯ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಯಾವುದೇ ಸಂಸ್ಥೆಗಳು ಸಮಾಜದಲ್ಲಿರುವ ಅರ್ಹರನ್ನು ಗುರುತಿಸಿ ಸಮಾಜಮುಖಿಯಾದ ಕೆಲಸವನ್ನು ಮಾಡಬೇಕು. ಅದೇ ರೀತಿ ಮಹಿಳೆಯರನ್ನು ಸಶಕ್ತಗೊಳಿಸಬೇಕು. ಸೊರಗುತ್ತಿ ರುವ ಮನಸ್ಸಿಗಳಿಗೆ ಒಳ್ಳೆಯ ವಿಚಾರಗಳನ್ನು ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ಉಜ್ವಲ್ ಡೆವಲಪರ್ಸ್‌ನ ಅಮಿತಾ ಪುರು ಷೋತ್ತಮ ಶೆಟ್ಟಿ, ಮಹಿಳಾ ಸಮಾಜದ ಅಧ್ಯಕ್ಷ ಜಯಂತಿ ಶೆಟ್ಟಿ ಭಾಗವಹಿಸಿ ದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟು ಪುಸ್ತಕ, ಬಡ ವಿದ್ಯಾರ್ಥಿ ಗಳಿಗೆ ಸಹಾಯಧನ ಮತ್ತು ಆಶಾ ನಿಲಯ ವಿಶೇಷ ಮಕ್ಕಳ ಶಾಲೆಗೆ ನೆರವು ನೀಡಲಾಯಿತು.

ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಇಂದು ರಮಾ ನಂದ ಭಟ್, ಕೋಶಾಧಿಕಾರಿ ಮಮತಾ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News