ಉಡುಪಿ ಶ್ರೀಕೃಷ್ಣ ಮಠದಲ್ಲಿ ಉಚಿತ ಆರೋಗ್ಯ ಮೇಳ

Update: 2019-07-14 15:07 GMT

ಉಡುಪಿ, ಜು.14: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿರುವ ಶ್ರೀಧನ್ವಂತರಿ ಚಿಕಿತ್ಸಾಲಯದ ವತಿಯಿಂದ ಉಚಿತ ಆರೋಗ್ಯ ಮೇಳವನ್ನು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿದ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಈ ಆರೋಗ್ಯ ಮೇಳದಲ್ಲಿ ಒಂದೇ ಸೂರಿನಡಿ ವಿವಿಧ ರೋಗಗಳ ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದು ಇದರಲ್ಲಿ ಭಾಗಿಗಳಾವುದು ಜನರ ಒಂದು ಭಾಗ್ಯ ಎಂದು ಹೇಳಿದರು.

ಮುಖ್ಯ ಅಥಿತಿಗಳಾಗಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಗುರುರಾಜ್ ರಾವ್ ಮೈಸೂರು, ಭಾಗವಹಿಸಿದ್ದರು. ಉಡುಪಿ ರೋಟರಿ ಅಧ್ಯಕ್ಷ ಜನಾದರ್ನ ಭಟ್, ಚ್ಯವನ ಡಾಯಾಗ್ನೊಸ್ಟಿಕ್ ಸೆಂಟರಿನ ಪಿ.ಎ.ಭಟ್, ಬ್ರಹ್ಮಗಿರಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರಿಪ್ರಸಾದ್ ರೈ, ಉಡುಪಿ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಲಕ್ಷ್ಮಿಕಾಂತ್ ಬೆಸ್ಕೂರ್, ಜಿಲ್ಲಾ ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯ ದಾಸ್, ಎಸ್.ಕೆ.ಡಿ.ಆರ್.ಡಿ.ಪಿ. ಇದರ ನಿರ್ದೇಶಕ ಗಣೇಶ, ಜಯಂಟ್ಸ್ ಗ್ರೂಪ್ ಬ್ರಹ್ಮವರದ ಅಧ್ಯಕ್ಷ ಸುಂದರ ಪೂಜಾರಿ, ರಾಘವೇಂದ್ರ ಪ್ರಭು ಕರ್ವಾಲು ಮೊದಲಾದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ವೈದ್ಯರಾದ ಡಾ.ನರಸಿಂಹ ಭಟ್, ಡಾ.ರಾಮಚಂದ್ರ ಕಾಮತ್, ಡಾ. ಹರೀಶ್ ಮಡಿವಾಳ, ಡಾ.ಜಯಪ್ರಕಾಶ್ ಭಟ್, ಡಾ.ಕೆ.ಆರ್. ಕಾಮತ್, ಡಾ.ಸುಮನಾ ಪೈ, ಡಾ.ಅಪೇಕ್ಷ ರಾವ್, ಡಾ.ರೇಖಾ ವಿವಿಧ ಆರೋಗ್ಯ ತಪಾಸಣೆಯನ್ನು ನಡೆಸಿದರು.

ಲಭ್ಯವಿರುವ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಚ್ಯವನ ಲ್ಯಾಬ್‌ನ ಸಿಬಂದಿ, ಮುನಿಯಲ್ ಆಯು ರ್ವೇದಿಕ್ ಕಾಲೇಜಿನ ವಿದ್ಯಾರ್ಥಿಗಳು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News