ಪಟ್ಲ ಶಾಲೆಯ ವಿದ್ಯಾರ್ಥಿ ಸರಕಾರ ಉದ್ಘಾಟನೆ
Update: 2019-07-14 20:39 IST
ಪಟ್ಲ, ಜು.14: ಪಟ್ಲ ಯು.ಎಸ್.ನಾಯಕ ಪ್ರೌಢಶಾಲೆಯ ಈ ವರ್ಷದ ಶಾಲಾ ಸಂಸತ್ -ವಿದ್ಯಾರ್ಥಿ ಸರಕಾರದ ಮಂಡಲದ ರಚನೆಯನ್ನು ಸಮಾಜ ಸೇವಕ ಉಡುಪಿ ವಿಶ್ವನಾಥ ಶೆಣೈ ಉದ್ಘಾಟಿಸಿದರು.
ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ಅಣ್ಣಯ್ಯ ನಾಯಕ ಮಂತ್ರಿ ಮಂಡಲದ ನಾಮಫಲಕ ಅನಾವರಣಗೊಳಿಸಿದರು. ಶಾಲಾ ಮುಖ್ಯೋಪಾ ಧ್ಯಾಯ ಶ್ರೀಕಾಂತ ಪ್ರಭು ಮಂತ್ರಿ ಮಂಡಲಶ್ರ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿದರು.
ಶಾಲಾ ವಿದ್ಯಾರ್ಥಿ ನಾಯಕ ಅನಿಲ್ ಸ್ವಾಗತಿಸಿದರು. ಶಿಕ್ಷಕರಾದ ಶಾಂತಪ್ಪ ಮೂಲಂಗಿ, ಕೊಡಂಕೂರು ದೇವರಾಜ ಮೂರ್ತಿ, ಶಾಲಾ ವಿದ್ಯಾರ್ಥಿನಿ ಗಿರಿಜಾ ಕಾರ್ಯಕ್ರಮ ನಿರೂಪಿಸಿದರು. ಪ್ರಮಿತ್ ವಂದಿಸಿದರು.