ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಹಜ್ಜಾಜಿಗಳಿಗೆ ಬೀಳ್ಕೊಡುಗೆ ಸಮಾರಂಭ

Update: 2019-07-14 16:30 GMT

ಮಂಗಳೂರು: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಹಜ್ಜ್ ತರಬೇತಿ ಶಿಬಿರ ಹಾಗೂ ಹಜ್ಜಾಜಿಗಳಿಗೆ ಬೀಳ್ಕೊಡುಗೆ ಸಮಾರಂಭವು ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ ಅವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಸುನ್ನಿ ಸೆಂಟರ್ ಮೇಲಂಗಡಿಯಲ್ಲಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮಕ್ಕೆ ಶಿಹಾಬುದ್ದೀನ್ ಸಖಾಫಿ ಚಾಲನೆ ನೀಡಿದರು.

ಸೆಕ್ಟರ್ ಉಪಾಧ್ಯಕ್ಷ ಜಾಬಿರ್ ಫಾಳಲಿ ಉಸ್ತಾದ್ ಉದ್ಘಾಟಿಸಿದರು. ಪ್ರಸ್ತುತ ಕಾರ್ಯಕ್ರಮಕ್ಕೆ ಉಳ್ಳಾಲ ಸೆಕ್ಟರ್ ವ್ಯಾಪ್ತಿಯ ಹಜ್ಜಾಜಿಗಳಿಗೆ ಶಿಹಾಬುದ್ದೀನ್ ಸಖಾಫಿ ಅವರಿಂದ ಪ್ರಯೋಗಿಕ ಅಧ್ಯಯನ ತರಗತಿ ನಡೆಯಿತು ನಂತರ ಹಜ್ಜಾಜಿಗಳಿಗೆ ಶಾಲು ಹೊದಿಸಿ ಬೀಳ್ಕೊಡುಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಬಶೀರ್ ಸಖಾಫಿ ಹಾಜರಿದ್ದರು. ಕಾರ್ಯಕ್ರಮವನ್ನು ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News