ಥಾಯ್ಲೆಂಡ್‌ನಲ್ಲಿ 5 ವರ್ಷಗಳ ಸೇನಾಡಳಿತ ಮುಕ್ತಾಯ: ಪ್ರಧಾನಿ ಘೋಷಣೆ

Update: 2019-07-15 16:27 GMT

ಬ್ಯಾಂಕಾಕ್, ಜು. 15: ಥಾಯ್ಲೆಂಡ್ ಪ್ರಧಾನಿ ಪ್ರಯೂತ್ ಚಾನ್-ಓಚ ಸೋಮವಾರ ಸೇನಾ ಸರಕಾರದ ಮುಖ್ಯಸ್ಥನ ಹುದ್ದೆಯಿಂದ ಅಧಿಕೃತವಾಗಿ ಕೆಳಗಿಳಿದಿದ್ದಾರೆ. ಐದು ವರ್ಷಗಳ ಸೇನಾಡಳಿತದ ಬಳಿಕ, ದೇಶವು ಇನ್ನು ಸಾಮಾನ್ಯ ಪ್ರಜಾಸತ್ತೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿ ಸೇನೆ ಪರ ಪಕ್ಷಗಳು ಹಾಗೂ ಸೇನೆಯು ನೇಮಕ ಮಾಡುವ ಮೇಲ್ಮನೆಯ ಬೆಂಬಲದೊಂದಿಗೆ ಪ್ರಯೂತ್ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಆದರೆ, ಈ ವ್ಯವಸ್ಥೆಯು ಪ್ರಜಾಸತ್ತೆಯನ್ನು ಹತ್ತಿಕ್ಕಲಿದೆ ಹಾಗೂ ಸೇನೆಗೆ ರಾಜಕೀಯ ಪಾತ್ರವನ್ನು ನೀಡಲಿದೆ ಎಂಬುದಾಗಿ ಟೀಕಾಕಾರರು ಹೇಳುತ್ತಾರೆ.ಸೇನಾಡಳಿತವು ಹಲವು ಕ್ಷೇತ್ರಗಳಲಿ ದೇಶಕ್ಕೆ ಯಶಸ್ಸು ತಂದಿದೆ ಎಂದು ದೇಶವನ್ನುದ್ದೇಶಿಸಿ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಪ್ರಯೂತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News