'ಡಿಜಿಟಲ್ ಸಹಿವುಳ್ಳ ಉದ್ದಿಮೆ ಪರವಾನಿಗೆ ಪಡೆಯಲು ಸೂಚನೆ'

Update: 2019-07-16 14:49 GMT

ಉಡುಪಿ, ಜು.16:ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಉದ್ದಿಮೆ ದಾರರು 2019-20 ನೇ ಸಾಲಿನಲ್ಲಿ ‘ವ್ಯಾಪಾರ’ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿವುಳ್ಳ ಉದ್ದಿಮೆ ಪರವಾನಿಗೆಯನ್ನು ಪಡೆಯಬೇಕಾಗಿದೆ.

ಅದರಂತೆ ಈಗಾಗಲೇ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿವುಳ್ಳ ಉದ್ದಿಮೆ ಪರವಾನಿಗೆ ಪಡೆಯಲು ಬಾಕಿ ಇರುವವರು/ನವೀಕರಿಸದೇ ಇರುವವರು ಜುಲೈ 31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆ.1ರ ನಂತರ ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ದಂಡನೆ ಪಾವತಿಸಬೇಕಾಗುತ್ತದೆ.

ಅದರಂತೆ ಈಗಾಗಲೇ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿವುಳ್ಳ ಉದ್ದಿಮೆ ಪರವಾನಿಗೆ ಪಡೆಯಲು ಬಾಕಿ ಇರುವವರು/ನವೀಕರಿಸದೇ ಇರುವವರು ಜುಲೈ 31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆ.1ರ ನಂತರ ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ದಂಡನೆ ಪಾವತಿಸಬೇಕಾಗುತ್ತದೆ. ಆದುದರಿಂದ ಪರವಾನಿಗೆ ನವೀಕರಿಸಲು ಬಾಕಿ ಇರುವವರು ಜು.31 ರೊಳಗೆ ಆನ್‌ಲೈನ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಹಾಗೂ ಪರಿಶೀಲನೆ ಸಂದರ್ಭದಲ್ಲಿ ಉದ್ದಿಮೆ ಪರವಾನಿಗೆ ನವೀಕರಿಸದೇ ಇರುವುದು ಕಂಡುಬಂದಲ್ಲಿ ನಿಯಮಾನುಸಾರಸೂಕ್ತಕ್ರಮ ಕೈಗೊಳ್ಳಲಾಗುವುದು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿಯನ್ನು ಅಥವಾ ವೆಬ್‌ಸೈಟ್: www.mrc.gov.intradelicenseloginನಲ್ಲಿ  ಪಡೆದು ಕೊಳ್ಳುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News