ಉಡುಪಿ: ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ

Update: 2019-07-16 14:56 GMT

ಉಡುಪಿ, ಜು.16: 2019-20ನೇ ಸಾಲಿನಲ್ಲಿ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ) ಸಮುದಾಯದ ಅಭ್ಯರ್ಥಿ ಗಳಿಗೆ ಪತ್ರಿಕೋದ್ಯಮ ಮತ್ತು ಸಂವಹನ ತರಬೇತಿ ನೀಡಲು ಪ್ರತಿ ಅಭ್ಯರ್ಥಿಗೆ ಮೂರು ತಿಂಗಳ ಅವಧಿಯ ತರಬೇತಿಗೆ 30,000 ರೂ., ಆರು ತಿಂಗಳ ಅವಧಿಗೆ 60,000 ರೂ. ಹಾಗೂ ಒಂದು ವರ್ಷದ ಅವಧಿಗೆ 1,20,000 ರೂ.ಗಳ ಪ್ರೋತ್ಸಾಹ ಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಷರತ್ತು: ಅಭ್ಯರ್ಥಿ ಕರ್ನಾಟಕದ ನಿವಾಸಿಯಾಗಿರಬೇಕು. ಅ್ಯರ್ಥಿಯ ವಯೋಮಿತಿ ಕನಿಷ್ಠ 18ರಿಂದ ಗರಿಷ್ಠ 40 ವರ್ಷದೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ. ಒಳಗಿರಬೇಕು. ಅ್ಯರ್ಥಿ ಪದವೀಧರ ನಾಗಿದ್ದು, ಪತ್ರಿಕೋದ್ಯಮ ತರಬೇತಿಯನ್ನು ಸರ್ಕಾರಿ/ಅರೆಸರ್ಕಾರಿ/ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಮೂಲಕ ಪಡೆಯುತ್ತಿರಬೇಕು. ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಮತ್ತಕು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಪ್ರೋತ್ಸಾಹಧನಕ್ಕೆ ಅರ್ಹರಾಗಿರುವರು. ಜೊತೆಗೆ ಕೇಂದ್ರ/ರಾಜ್ಯ ಸರ್ಕಾರದಿಂದ ನೀಡುವ ಇತರೆ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ತರಬೇತಿ ಪ್ರಾರಂಭವಾದ ನಂತರ ಪ್ರತಿ ಅಭ್ಯರ್ಥಿಗೆ ಒಂದು ಲ್ಯಾಪ್‌ಟಾಪ್ ವುತ್ತು ಕ್ಯಾಮೆರಾ ನೀಡಲಾಗುವುದು.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾಲೇಜು ಅ್ಯರ್ಥಿಗಳು ಪ್ರೋತ್ಸಾಹ ಧನದ ಅರ್ಜಿಯನ್ನು ಇಲಾಖೆಯ ವೆಬ್‌ಸೈಟ್-https://gokdom.kar.nic.in https://dom.karnataka.gov.in/udupi ಅಥವಾ ಮೂಲಕ ಡೌನ್‌ಲೋಡ್ ಮಾಡಿ ಪ್ರಿಂಟ್ ಪಡೆದು ಮಾರ್ಗಸೂಚಿಯಂತೆ ಭರ್ತಿಮಾಡಿ ಸೂಚಿಸಿರುವ ಎಲ್ಲಾ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರಜತಾದ್ರಿ, ಜಿಲ್ಲಾ ಅಧಿಕಾರಿಗಳ ಕಛೇರಿ ಸಂಕೀರ್ಣ, ಮಣಿಪಾಲ, ಉಡುಪಿ ಇಲ್ಲಿಗೆ ಸಲ್ಲಿಸಬೇಕು.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ:0820-2574881ಅನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News