ಇಂಡೋನೇಶ್ಯ ದ್ವೀಪದಲ್ಲಿ ಭೂಕಂಪ; ಓರ್ವ ಸಾವು

Update: 2019-07-16 15:51 GMT

ಡೆನ್‌ಪಸರ್ (ಇಂಡೋನೇಶ್ಯ), ಜು. 16: ರಿಕ್ಟರ್ ಮಾಪಕದಲ್ಲಿ 7.3ರ ತೀವ್ರತೆ ಹೊಂದಿದ್ದ ಭೂಕಂಪ ಪೂರ್ವ ಇಂಡೋನೇಶ್ಯದ ಮೊಲುಕಸ್ ದ್ವೀಪದಲ್ಲಿ ರವಿವಾರ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ.

ಈ ದುರಂತದಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಜನರು ಗಾಬರಿಯಿಂದ ತಮ್ಮ ಮನೆಗಳಿಂದ ಹೊರಬಂದರು.

ಟರ್ನೇಟ್ ನಗರದ ದಕ್ಷಿಣಕ್ಕೆ 168 ಕಿ.ಮೀ. ದೂರದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಅದು ಹೇಳಿದೆ.

ಭೂಕಂಪದ ತೀವ್ರತೆಯು ಸುನಾಮಿ ಅಲೆಗಳನ್ನು ಸೃಷ್ಟಿಸುವ ಮಟ್ಟದಲ್ಲಿ ಇರಲಿಲ್ಲ ಎಂದು ಇಂಡೋನೇಶ್ಯದ ಹವಾಮಾನ ಸಂಸ್ಥೆ ಬಿಎಂಕೆಜಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News