ಜು.17: ಒನ್ ಸ್ಟಾಪ್ ಸರ್ವೀಸ್ ಸೆಂಟರ್’ಗೆ ಚಾಲನೆ

Update: 2019-07-16 15:52 GMT

ಮಂಗಳೂರು, ಜು.16: ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆ ಮತ್ತು ಭದ್ರತೆಗೆ ವೈದ್ಯಕೀಯ, ಕಾನೂನು ಸಲಹೆ, ಕೌನ್ಸಿಲಿಂಗ್ ಮೊದಲಾದ ಸೇವೆ ಒಂದೇ ಸೂರಿನಲ್ಲಿ ನೀಡಲು ಆರಂಭವಾಗಿರುವ ‘ಒನ್ ಸ್ಟಾಪ್ ಸರ್ವೀಸ್ ಸೆಂಟರ್’ ಜು.17ರಂದು ಬೆಳಗ್ಗೆ 11 ಗಂಟೆಗೆ ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸ್ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.

ಕೌಟುಂಬಿಕ, ಸಾಮಾಜಿಕವಾಗಿ ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಷ್ಟೇ ಅವಕಾಶವಿತ್ತು. ಇನ್ನು ಮುಂದೆ ಅವರಿಗೆ ಠಾಣೆಯಲ್ಲಿಯೇ ವೈದ್ಯಕೀಯ ಸೇವೆ, ಕಾನೂನು ಸಲಹೆ, ಆಪ್ತ ಸಮಾಲೋಚನೆ ಸೇವೆ ಲಭ್ಯವಾಗಲಿದೆ.

ಹಿರಿಯ ಹಾಗೂ ಕಿರಿಯ ಮಹಿಳಾ ಪೊಲೀಸರು ಈ ಕೇಂದ್ರವನ್ನು ಉದ್ಘಾಟಿಸುವರು. ಇದರ ಪ್ರಯೋಜನವನ್ನು ನೊಂದ ಮಹಿಳೆಯರು ಪಡೆದು ಕೊಳ್ಳಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News