×
Ad

ಇಎಸ್‌ಐ ಅಧಿಕಾರಿ ವಿರುದ್ಧ ಮಾನನಷ್ಟ ಮೊಕದ್ದಮೆ: ಮಾಸ್ ಇಂಡಿಯಾ

Update: 2019-07-16 21:26 IST

ಉಡುಪಿ, ಜು.16: ಇಎಸ್‌ಐ ಸಂಸ್ಥೆಯ ಹೆಸರಿನಲ್ಲಿ ಮೋಸ ಮಾಡಿರುವು ದಾಗಿ ದೂರುವ ಮೂಲಕ ಸುಳ್ಳು ಅಪಪ್ರಚಾರ ಮಾಡಿರುವ ಇಎಸ್‌ಐ ಉಪ ಪ್ರಾದೇಶಿಕ ಕಚೇರಿ ಮಂಗಳೂರು ಇದರ ಪ್ರಭಾರ ಹಿರಿಯ ಉಪನಿರ್ದೇಶಕ ಎಸ್.ಶಿವರಾಮಕೃಷ್ಣನ್ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಮಾಸ್ ಇಂಡಿಯಾ ಸಂಸ್ಥೆ ತಿಳಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಸ್ ಇಂಡಿಯಾ ಅಧ್ಯಕ್ಷ ಜಿ.ಎ.ಕೋಟಿಯಾರ್, ನಾನು, ಉಡುಪಿ ಸಿದ್ಧಿ ವಿನಾಯಕ ಆಟೋ ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್ ಮಾಲಕ ವಿಠಲ ಜತ್ತನ್ ಹಾಗೂ ಹರೀಶ್ ಇಎಸ್‌ಐ ಹೆಸರಿನಲ್ಲಿ ಸಮಾಜಕ್ಕೆ ವಂಚನೆ ಮಾಡಿ ಹಣವನ್ನು ದುರುಪಯೋಗ ಪಡಿಸಿದ್ದೇವೆ ಎಂಬುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ನಾವು ಯಾರು ಕೂಡ ಯಾವುದೇ ಮೋಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಠಲ್ ಜತ್ತನ್ ಯಾವುದೇ ರೀತಿಯಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿಲ್ಲ. ಶಿವರಾಮಕೃಷ್ಣನ್ ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಪ್ರಧಾನ ಮಂತ್ರಿಗೆ ದೂರು ನೀಡಲಾಗಿದೆ. ಅಲ್ಲದೆ ಜು.22ರಂದು ಉಡುಪಿ ನ್ಯಾಯಾ ಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು. ಪೊಲೀಸರು ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಠಲ್ ಜತ್ತನ್, ಅಟೋ ಚಾಲಕರ ಮಾಲಕರ ಸಂಘ ಟನೆಯ ರಾಜೇಶ್ ಬಿ.ಶೆಟ್ಟಿ, ಮಾಸ್ ಇಂಡಿಯಾದ ರವಿರಾಜ್ ಶೆಟ್ಟಿ, ಚೆನ್ನ ಕೇಶವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News