ಯುವಕ ನಾಪತ್ತೆ

Update: 2019-07-16 16:04 GMT

ಉಡುಪಿ, ಜು.16: ಕಾರ್ಕಳ ತಾಲೂಕು ದುರ್ಗಾ ಗ್ರಾಮ ಮಲೆಬೆಟ್ಟು ನಿವಾಸಿ ಆನಂದ (30) ಎಂಬುವವರು ಜು.12ರಂದು ಸಂಜೆ 4ರಿಂದ 5ಗಂಟೆಗಳ ಮಧ್ಯಾವಧಿಯಲ್ಲಿ ಮನೆಯಿಂದ ಕಾಣೆ ಯಾಗಿದ್ದಾರೆ.

ಆನಂದ 5 ಅಡಿ 10 ಇಂಚು ಎತ್ತರವಿದ್ದು, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ. ಇವರ ಪತ್ತೆಯಾದಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News