×
Ad

ಆದರ್ಶ ಶಿಕ್ಷಕರ ರಾಜ್ಯಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2019-07-16 22:46 IST

ಉಡುಪಿ, ಜು.16: ರಾಯಚೂರಿನ ಕಲಾ ಸಂಕುಲ ಸಂಸ್ಥೆ ಪ್ರತಿ ವರ್ಷ ನೀಡುವ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಉತ್ತಮ ಮತ್ತು ಆದರ್ಶಪ್ರಾಯರಾಗಿ ಸೇವೆ ಸಲ್ಲಿಸಿದ 25 ಮಂದಿ ಶಿಕ್ಷಕ ಶಿಕ್ಷಕಿಯರಿಗೆ ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಮತ್ತು ರಾಜ್ಯದ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಆಸಕ್ತರು ತಮ್ಮ ಸಾಧನೆಯ ಸಂಕ್ಷಿಪ್ತ ಪರಿಚಯ, 2 ಭಾವಚಿತ್ರದೊಂದಿಗೆ ಆ. 15ರೊಳಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ವಿಳಾಸ: ಅಧ್ಯಕ್ಷರು. ಕಲಾ ಸಂಕುಲ ಸಂಸ್ಥೆ(ರಿ), ಟಿ-3,576/4 ಆಶಾಪೂರು ರಸ್ತೆ, ಆಫೀಸರ್ಸ್‌ ಕಾಲೋನಿ. ರಾಯಚೂರು-584101 (ದೂರವಾಣಿ:9448777383)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News