×
Ad

ಕೆಮ್ಮಾರ : ಹಳೆ ವಿದ್ಯಾರ್ಥಿ, ಶಾಲಾಭಿವೃದ್ಧಿ ಸಮಿತಿಯ ಸಭೆ

Update: 2019-07-16 23:36 IST

ಕೆಮ್ಮಾರ :  ದ. ಕ. ಜಿ. ಪಂ. ಉ. ಹಿ. ಪ್ರಾಥಮಿಕ ಶಾಲೆ ಕೆಮ್ಮಾರ ಇದರ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಭೆಯು  ಕೆಮ್ಮಾರ ಶಾಲೆಯಲ್ಲಿ ಜರುಗಿತು. 

ಸಭೆಯಲ್ಲಿ ಶಾಲಾ ಆಟದ ಮೈದಾನದಲ್ಲಿ ಹಳೆ ವಿದ್ಯಾರ್ಥಿಗಳು ಆಡುವ ಬಗ್ಗೆ ಇದ್ದ ವಿವಾದದ ಚರ್ಚೆ ನಡೆದು,  ಆಡಲು ಅನುಮತಿಯನ್ನು  ನೀಡಲಾಯಿತು.  ಅಲ್ಲದೆ ಆಟದ ಸಮಯದಲ್ಲಿ ಶಾಲೆಯ ಆಸ್ತಿ ಪಾಸ್ತಿಗಳಿಗೆ ಯಾವುದೇ ಹಾನಿಯಾದರೆ ಆಟಗಾರರೇ ಜವಾಬ್ದಾರಿ ವಹಿಸಬೇಕು ಎಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾ. ಪಂಚಾಯತ್ ಅಧ್ಯಕ್ಷ  ಶೌಕತ್ ಅಲಿ,  ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಸೆಲಿಕತ್,  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ನಾಗರಿಕ ಸಮಿತಿ ಅಧ್ಯಕ್ಷ ಅಝೀಝ್ ಬಿ. ಕೆ. ಅಡ್ವೊಕೇಟ್ ಕಬೀರ್ ಕೆಮ್ಮಾರ, ಗ್ರಾ. ಪಂಚಾಯತ್ ಸದಸ್ಯರು ಹಾಗೂ ಹ. ವಿ. ಸಂಘದ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News