ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Update: 2019-07-18 10:57 GMT

ಮಂಗಳೂರು: ರಾಷ್ಟ್ರೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ (ಮುಸ್ಲಿಮ್, ಕ್ರೈಸ್ತ, ಜೈನ, ಬುದ್ಧ, ಸಿಖ್, ಪಾರ್ಸಿ) ವಿದ್ಯಾರ್ಥಿನಿಯರಿಗೆ ಬೇಗಂ ಹಝ್ರತ್ ಮಹಲ್ (ಮೌಲಾನಾ ಆಝಾದ್) ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕಾಗಿ 9 ರಿಂದ 12ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು, ಇದನ್ನು ಸದುಪಯೋಗಪಡಿಸಬೇಕೆಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ - ಮಸ್ಜಿದ್ ಒನ್ ಮೂವ್ಮೆಂಟ್  ತಿಳಿಸಿದೆ.

ಅರ್ಹತೆಗಳು: ಶೇ. 50% ಅಂಕ ಪಡೆದಿರಬೇಕು, ವಿದ್ಯಾರ್ಥಿನಿಯರಿಗೆ ಮಾತ್ರವಾಗಿದೆ. ಆದಾಯ ಮಿತಿ 2 ಲಕ್ಷ ರೂ. ಮೀರಿರಬಾರದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಹಿಂದಿನ ತರಗತಿಯ ಅಂಕಪಟ್ಟಿ, ವ್ಯಾಸಂಗ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಕಾಲೇಜು/ಸ್ಕೂಲ್ ಡಯಸ್ ಕೋಡ್ ಹಾಗು ಭಾವಚಿತ್ರ ಹೊಂದಿರಬೇಕು.

ಎಲ್ಲಾ ದಾಖಲೆಗಳು ಪ್ರಾಂಶುಪಾಲರು / ಗಜೆಟೆಡ್ ಅಧಿಕಾರಿ ಧೃಡೀಕರಿಸಿರಬೇಕು ಮತ್ತು ದಾಖಲೆಗಳು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಇರಬೇಕು. ಅರ್ಜಿ ಸಲ್ಲಿಸಲು ಅ. 30 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ 0824-4113599, www.maef.nic.in ಸಂಪರ್ಕಿಸಲು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್,  ಮಸ್ಜಿದ್ ಒನ್ ಮೂವ್ಮೆಂಟ್ - ದ.ಕ ಜಿಲ್ಲೆ ಇದರ ಅಹ್ಮದ್ ಮೊಹಿಯುದ್ದೀನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News