ವಾಣಿಜ್ಯ ಮಳಿಗೆಗಳನ್ನು ವಿಲೇವಾರಿ ಮಾಡಲು ನೂತನ ನಿಯಮಾವಳಿ: ಸಚಿವ ಖಾದರ್

Update: 2019-07-17 12:29 GMT

ಮಂಗಳೂರು, ಜು.17: ರಾಜ್ಯದ ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ವಾಣಿಜ್ಯ ಮಳಿಗೆ ಗಳನ್ನು ವಿಲೇವಾರಿ ಮಾಡಲು ನೂತನ ನಿಯಮಾವಳಿ ಯನ್ನು ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸುದ್ದಿ ಗೋಷ್ಟಿ ಯಲ್ಲಿಂದ ತಿಳಿಸಿದ್ದಾರೆ.

ಬೃಹತ್  ಬೆಂಗಳೂರು ಮಹಾನಗರ ಪಾಲಿಕೆಯನ್ನು ಹೊರತು ಪಡಿಸಿ ರಾಜ್ಯದ ವಿವಿಧ ನಗರ ಸ್ಥಳೀಯಾಡಳಿತ ಸಂಸ್ಥೆ ಗಳಲ್ಲಿ ಈ ನಿಯಮಾವಳಿ ಯನ್ನು ರೂಪಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ರಾಜ್ಯದಲ್ಲಿನ ಖಾಸಗಿ ವಸತಿನಿಲಯಗಳು, ಲಾಡ್ಜ್ ಗಳಿಗೆ ಸಂಬಂಧಿಸಿದಂತೆ ಕರಡು ನಿಯಮಾವಳಿಯನ್ನು ಸರಕಾರ ರೂಪಿಸಿದೆ. ಈ ಬಗ್ಗೆ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆ ಯನ್ನು ಸ್ವೀಕರಿಸಿದ ಬಳಿಕ ಅಂತಿಮ ನಿಯಮಾವಳಿ ರೂಪಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ಅವೈಜ್ಞಾನಿಕ:- ಕೇಂದ್ರ ಸರಕಾರದ ಯಾವುದೇ ಯೋಜನೆ ಅನುಷ್ಠಾನ ಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ರಿಗೆ ಕೆಲವೊಂದು ವಿನಾಯಿತಿ ಗಳನ್ನು ನೀಡಬೇಕಾಗುತ್ತದೆ. ಆದರೆ ಸುರತ್ಕಲ್ ನಲ್ಲಿ ಈ ನಿಯಮಗಳನ್ನು ಪಾಲಿಸಲಾಗಿಲ್ಲ. ಹೆಜಮಾಡಿಯಲ್ಲಿ ಟೋಲ್ ಸಂಗ್ರಹವಾದ ಬಳಿಕ ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕಾಗಿತ್ತು ಆದರೆ ಸುರತ್ಕಲ್ ನಲ್ಲಿ ಈ ನಿಯಮ ಪಾಲಿಸಿಲ್ಲ.ಗುತ್ತಿಗೆ ಸಂಸ್ಥೆ ಗಳಿಗೆ ಹಣ ಪಾವತಿಯ ಸಮಸ್ಯೆ ಯ ಬಗ್ಗೆ ಕೇಂದ್ರ ಸರಕಾರದ ಸಚಿವರು ಮಧ್ಯೆ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News