ಸೆ.7: ಮಂಗಳೂರಿನಲ್ಲಿ ‘ನಮ್ಮ ಅಬ್ಬಕ್ಕ’ ಸಾಂಸ್ಕೃತಿಕ ಸಂಭ್ರಮ

Update: 2019-07-17 12:40 GMT

ಮಂಗಳೂರು, ಜು.17: ‘ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ದ್ವಿತೀಯ ವರ್ಷದ ‘ನಮ್ಮ ಅಬ್ಬಕ್ಕ’ ಸಾಂಸ್ಕೃತಿಕ ಸಂಭ್ರಮವು ಸೆ.7ರಂದು ನಗರದ ಪುರಭವನದಲ್ಲಿ ಏರ್ಪಡಿಸಲಾಗಿದೆ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ತೊಕ್ಕೊಟ್ಟು ಶ್ರೀ ರತ್ನಂ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಪ್ರತಿಷ್ಠಾನದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ಇದೇ ಮೊದಲ ಬಾರಿಗೆ ಪ್ರಸಿದ್ಧ ಅರ್ಥಧಾರಿಗಳಿಂದ ‘ವೀರ ನಾರಿ ಅಬ್ಬಕ್ಕ’ ಯಕ್ಷಗಾನ ತಾಳಮದ್ದಳೆ, ನಗೆ ಹಬ್ಬ, ದೇಶಭಕ್ತಿ ಗೀತ ಗಾಯನ ಇತ್ಯಾದಿ ಸಾಂಸ್ಕೃತಿಕ ಕಲಾಪಗಳನ್ನು ನಡೆಸಲಾಗುವುದು ಎಂದು ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.

ವಿರಾಂಟ್ ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಕೋಶಾಧಿಕಾರಿ ಪಿ.ಡಿ.ಶೆಟ್ಟಿ, ಪದಾಧಿಕಾರಿಗಳಾದ ಚಂದ್ರಹಾಸ ಅಡ್ಯಂತಾಯ, ನಿರ್ಮಲ್ ಕುಮಾರ್ ಭಟ್, ಅರುಣ್ ಉಳ್ಳಾಲ್, ಸತೀಶ್ ಸುರತ್ಕಲ್, ಆನಂದ ಶೆಟ್ಟಿ, ಗೀತಾ ಜುಡಿತ್ ಸಲ್ದಾನ, ಪ್ರತಿಮಾ ಹೆಬ್ಬಾರ್, ವಿನುತಾ ನಾಯ್ಕ್, ಶ್ಯಾಮಲಾರಾಜ್ ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ತ್ಯಾಗಂ ಹರೇಕಳ ಸ್ವಾಗತಿಸಿದರು. ಸಾಂಸ್ಕೃತಿಕ ಸಂಚಾಲಕ ಕೆ.ಲಕ್ಷ್ಮಿನಾರಾಯಣ ರೈ ಹರೇಕಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News