ಬಾಲಕಿಯ ನೆರವಿಗೆ ಮನವಿ

Update: 2019-07-17 12:42 GMT

ಗುರುಪುರ, ಜು.17: ಇಲ್ಲಿನ ಮೂಳೂರು ಗ್ರಾಮದ ಮಠದ ಗುಡ್ಡೆಯ ನಿವಾಸಿ ಸಂತೋಷ್ ಶೆಟ್ಟಿ-ಪೂಜಾ ಅವರ ಮಗಳು ಯೋಕ್ಷಾ ಶೆಟ್ಟಿ ಎಂಬಾಕೆಗೆ ಸಣ್ಣ ಪ್ರಾಯದಲ್ಲೇ ಸಾವು-ನೋವಿನ ವಿಚಿತ್ರ ಕಾಯಿಲೆ ಅಂಟಿಕೊಂಡಿವೆ. ಅಂದರೆ ಒಂದೂವರೆ ಲಕ್ಷ ಮಕ್ಕಳಲ್ಲಿ ಅಪೂರ್ವ ಎಂಬಂತೆ ಒಬ್ಬರಲ್ಲಿ ಕಂಡು ಬರುವ ‘ಗೌಚರ್’ ಎಂಬ ಆನುವಂಶಿಕ ಕಾಯಿಲೆ ಎರಡೂವರೆ ವರ್ಷದ ಯೋಕ್ಷಾ ಶೆಟ್ಟಿಗೆ ಬಾಧಿಸಿದೆ. ಇದು ಜೀವನಪರ್ಯಂತ ಕಾಡುವ ಕಾಯಿಲೆಯಾಗಿದ್ದು, ಔಷಧಿ ದುಬಾರಿಯಾಗಿದೆ. ಆದ್ದರಿಂದಲೇ ಮಗು ಉಳಿಸಲು ಶತಾಯಗತ ಪ್ರಯತ್ನ ನಡೆಸುತ್ತಿರುವ ತಂದೆ-ತಾಯಿ ಈಗ ಸಹಾಯಕ್ಕಾಗಿ ಮೊರೆ ಹೊಕ್ಕಿದ್ದಾರೆ.

ಅತ್ಯಂತ ಕಡು ಬಡತನದಲ್ಲಿರುವ ಯೋಕ್ಷಾಳ ತಂದೆ ಸಂತೋಷ್ ಶೆಟ್ಟಿ ಪೈಂಟರ್ ಕೆಲಸ ಮಾಡುತ್ತಿದ್ದರೆ, ತಾಯಿ ಪೂಜಾ ಮನೆಗೆಲಸ ಮಾಡುತ್ತಿದ್ದಾರೆ. ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಈವರೆಗೆ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದ್ದಾರೆ. ಆದರೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.

ಮಗುವಿನ ಕಾಯಿಲೆ ನಿಯಂತ್ರಿಸಲು ಎರಡು ವಾರಕ್ಕೆ ಒಂದು ಬಾರಿಯಂತೆ ಜೀವನಪರ್ಯಂತ ‘ಸೆರೆಝಿಮ್’ ಎಂಬ ದುಬಾರಿ ಔಷಧಿ ನೀಡಬೇಕಾಗುತ್ತದೆ. ಹೊಟ್ಟೆಯೊಳಗಿನ ಈ ಕಾಯಿಲೆಗೆ ಆರಂಭದ ಚಿಕಿತ್ಸೆಗಾಗಿ 25ರಿಂದ 30 ಲಕ್ಷ ರೂ. ಆಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಈ ಕುಟುಂಬಕ್ಕೆ ಇಷ್ಟೊಂದು ಹಣ ಕೂಡಿಸಲು ಅಸಾಧ್ಯದ ಸಂಗತಿಯಾಗಿದೆ. ಹಾಗಾಗಿ ದಾನಿಗಳು ಪೂಜಾ. ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆ, ಎಸ್‌ಬಿ ಖಾತೆ ಸಂಖ್ಯೆ : 01242250005816. ಐಎಫ್‌ಎಸ್‌ಸಿ: ಎಸ್‌ವೈಎನ್‌ಬಿ0000124.ಕ್ಕೆ ನೆರವು ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News