ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

Update: 2019-07-17 15:33 GMT

ಉಡುಪಿ, ಜು.17: ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್)ನಿಂದ, ಡಿಪ್ಲೋಮಾ ತಾಂತ್ರಿಕ ಪದವಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ನಿಗದಿತ ವಿದ್ಯಾರ್ಹತೆ: ಎಸೆಸೆಲ್ಸಿ ತೇರ್ಗಡೆ ಜೊತೆಗೆ ಇಂಜಿನಿಯರಿಂಗ್‌ನ ವಿವಿಧ ಶಾಖೆಗಳ ಡಿಪ್ಲೋಮಾ ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಅ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಅರ್ಜಿ ಸಲ್ಲಿಸಬಹುದು.

ಸರಕಾರದ ನಿಯಮದಂತೆ ಸ್ಟೈಪಂಡ್ ಲಭ್ಯವಿದೆ.

 ಉಡುಪಿ ಜಿಲ್ಲೆಯ ಆಸಕ್ತ ಅರ್ಹ ಅ್ಯರ್ಥಿಗಳು ತಮ್ಮ ಎಸೆಸೆಲ್ಸಿ ಹಾಗೂ ಇತರ ಅಂಕಪಟ್ಟಿಗಳ, ದಾಖಲೆಗಳ ಝೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆ ಯನ್ನು ಪಡೆದು ಅರ್ಜಿ ಸಲ್ಲಿಸಬೇಕು. ಅರ್ಜಿ ಲ್ಲಿಸಲು ಆ.10 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ಇವರ ಕಚೇರಿ ದೂರವಾಣಿ ಸಂಖ್ಯೆ: 0820-2574869, 9480259790, 8618599698, 9945856670 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News