ಉಡುಪಿ; ಮಳೆಗಾಲದ ಸಾಮಾನ್ಯ ರೋಗಗಳ ಕುರಿತು ಉಪನ್ಯಾಸ

Update: 2019-07-17 16:08 GMT

 ಉಡುಪಿ, ಜು.17: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ಜನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ಮಳೆಗಾಲದ ಸಾಮಾನ್ಯ ರೋಗಗಳು ಮತ್ತು ಸುಲಭೋಪಾಯಗಳು ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಬುಧವಾರ ಉದ್ಯಾವರದ ಸೈಂಟ್ ಕ್ಸೇವಿಯರ್ಸ್‌ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಕಾಲೇಜಿನ ಕೌಮಾರೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ನಾಗರತ್ನ ಎಸ್.ಜೆ. ಸಂಪನ್ಮೂಲ ವ್ಯಕ್ತಿಯಾಗಿ ಮಳೆಗಾಲದಲ್ಲಿ ಬರುವ ಶೀತ, ಕೆಮ್ಮು, ಅನೇಕ ವಿಧದ ಜ್ವರಗಳು, ಅಸ್ತಮಾ ಮುಂತಾದ ರೋಗಗಳಿಗೆ ಮನೆಯಲ್ಲೆ ಗಿಡಮೂಲಿಕೆಗಳಿಂದ ಸುಲಭವಾಗಿ ತಯಾರು ಮಾಡಿ ಸೇವಿಸಬಹುದಾದ ಔಷಧಿಗಳ ಪರಿಚಯವನ್ನು ನೀಡಿದರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಜೆಸಿಂತಾ ಅಂದ್ರಾದೆ ವಹಿಸಿದ್ದರು. ಜಾನಪದ ವೈದ್ಯಕೀಯ ಸಂಶೋಧನ ಕೇಂದ್ರ ಮುಖ್ಯಸ್ಥೆ ಡಾ.ಚೈತ್ರ ಎಸ್.ಹೆಬ್ಬಾರ್, ಸದಸ್ಯ ಡಾ.ಶ್ರೀನಿಧಿ ಧನ್ಯ, ಶಾಲಾ ಶಿಕ್ಷಕಿಯರು ಉಪಸ್ಥಿತರಿ ್ದರು. ವಿದ್ಯಾರ್ಥಿನಿ ಸೋನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News