ಕೇಂದ್ರದಿಂದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸಂಗ್ರಹ

Update: 2019-07-17 16:47 GMT

ಹೊಸದಿಲ್ಲಿ, ಜು. 17: ಕುಸಿಯುತ್ತಿರುವ ಅಸಂಘಟಿತ ವಲಯ ಅಭಿವೃದ್ಧಿಯ ಸಕಾರಾತ್ಮಕ ಸೂಚಕ. ಭಾರತದಲ್ಲಿರುವ ಅಂಸಘಟಿತ ಕಾರ್ಮಿಕರ ಪ್ರತ್ಯೇಕ ದತ್ತಾಂಶವನ್ನು ಸರಕಾರ ಸಿದ್ಧಪಡಿಸಲಿದೆ ಎಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ ಬುಧವಾರ ರಾಜ್ಯ ಸಭೆಯಲ್ಲಿ ತಿಳಿಸಿದರು.

ಸಂಘಟಿತ ವಲಯವನ್ನು ವಿಸ್ತರಿಸುವತ್ತ ಕೇಂದ್ರ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ‘‘ನಮ್ಮ ಸಚಿವಾಲಯ ಅಸಂಘಟಿತ ವಲಯದ ರಾಷ್ಟ್ರೀಯ ದತ್ತಾಂಶವನ್ನು ಸಿದ್ದಪಡಿಸುತ್ತಿದೆ’’ ಎಂದರು. ಅಸಂಘಟಿತ ವಲಯದ್ದೆ ಪ್ರತ್ಯೇಕ ಪ್ರಕಟಿತ ದತ್ತಾಂಶ ಇಲ್ಲ. ಆದರೆ, ಅಸಂಘಟಿತ ವಲಯದ ಕುಸಿತ ಅಭಿವೃದ್ಧಿಯ ಸಕಾರಾತ್ಮಕ ಸೂಚಕ ಎಂದು ಅವರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ರೋಜ್‌ಗಾರ್ ಪ್ರೋತ್ಸಾಹನ ಯೋಜನೆ (ಪಿಎಂಆರ್‌ಪಿವೈ) ಉಪಕ್ರಮದ ಅಡಿಯಲ್ಲಿ ಫಲಾನುಭವಿಗಳ ನೋಂದಣಿಯಲ್ಲಿ ಅಭೂತಪೂರ್ವ ಬೆಳವಣಿಗೆಯಾಗಿದೆ.

 ಕಳೆದ ವರ್ಷ ಈ ಯೋಜನೆಯಿಂದ 1.2 ಕೋಟಿ ಉದ್ಯೋಗಿಗಳು ಲಾಭ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕಾಯ್ದೆ ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಕಲ್ಯಾಣ ಯೋಜನೆಗಳನ್ನು ರೂಪಿಸುವ ಷರತ್ತು ವಿಧಿಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News