ಹಜ್ ಯಾತ್ರೆ: ಮಂಗಳೂರಿನಿಂದ ತೆರಳಿದ ಎರಡನೇ ತಂಡ

Update: 2019-07-18 07:59 GMT

ಮಂಗಳೂರು, ಜು.18: ಕರ್ನಾಟಕ ರಾಜ್ಯ ಹಜ್ ಸಮಿತಿಯ ವತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ ಪವಿತ್ರ ಹಜ್ ಯಾತ್ರೆಗೆ ತೆರಳುವ ಎರಡನೇ ತಂಡ ಇಂದು ಮಧ್ಯಾಹ್ನ ತೆರಳಿದೆ.

ಎರಡನೇ ತಂಡದಲ್ಲಿ 78 ಪುರುಷರು ಮತ್ತು 72 ಮಹಿಳೆಯರ ಸಹಿತ ಒಟ್ಟು 150 ಯಾತ್ರಾರ್ಥಿಗಳಿದ್ದರು. ಇವರನ್ನೊಳಗೊಂಡ ವಿಮಾನವು ಇಂದು ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News