ಮದೀನಾ: ಮಂಗಳೂರಿನ ಹಜ್ ಯಾತ್ರಾರ್ಥಿಗಳ ಮೊದಲ ತಂಡಕ್ಕೆ ಸ್ವಾಗತ

Update: 2019-07-18 12:36 GMT

ಮದೀನಾ: ಮಂಗಳೂರು ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ ಹೊರಟ ಹಜ್ ಯಾತ್ರಾರ್ಥಿಗಳ ಮೊದಲ ತಂಡಕ್ಕೆ ಕರ್ನಾಟಕದ ಅನಿವಾಸಿ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಹಜ್ ಸ್ವಯಂ ಸೇವಕರ ತಂಡವು ಮದೀನಾದಲ್ಲಿ ಸ್ವಾಗತ ಕೋರಿತು.

ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ 150 ಮಂದಿಯ ಹಜ್ಜಾಜ್‌ಗಳಿಗೆ ನೀರು-ಖರ್ಜೂರ ಸಹಿತ ವಿಶೇಷ ಫಲಹಾರದ ಕಿಟ್ ನೀಡಿ ಸ್ವಾಗತಿಸಲಾಯಿತಲ್ಲದೆ, ಮದೀನಾ ಮುನವ್ವರದ ಬಗ್ಗೆ ಮಾಹಿತಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News