×
Ad

ಪಿಎಂಇಜಿಪಿ ಯೋಜನೆಯಲ್ಲಿ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

Update: 2019-07-18 20:42 IST

ಉಡುಪಿ, ಜು.18: ಉಡುಪಿ ಮತ್ತು ಇತರ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಕಾರ್ಯಕ್ರಮ (ಪಿಎಂಇಜಿಪಿ) ಅಡಿಯಲ್ಲಿ ಸಾಲ ಮತ್ತು ಸಬ್ಸಿಡಿ ಮಂಜೂರು ಮಾಡುವುದಾಗಿ ಕೆಲವೊಂದು ಸಂಸ್ಥೆಗಳು ಭರವಸೆ ನೀಡಿ, ಸಾರ್ವಜನಿಕರಿಗೆ ವಂಚಿುತ್ತಿರುವುದು ಗಮನಕ್ಕೆ ಬಂದಿದೆ.

ತಮ್ಮ ವೈಯುಕ್ತಿಕ ಲಾಭಕ್ಕಾಗಿ ಮೋಸ ಮಾಡಲು ಪ್ರಯತ್ನಿಸುತ್ತಿರುವ ಇಂತಹ ಮೋಸದ ಅಂಶಗಳಿಗೆ ಉದ್ಯಮಿಗಳು ಬಲಿಯಾಗದಂತೆ ಪಿಎಂಇಜಿಪಿ ಯೋಜನೆಯ ರಾಜ್ಯಕಚೇರಿ, ಖಾದಿ ಮತ್ತು ಗ್ರಾಮಾಂತರ ಕೈಗಾರಿಕಾ ಆಯೋಗ ಸಾರ್ವಜನಿಕರಿಗೆ ತಿಳಿಸಿದೆ.

ಇಂತಹ ಯಾವುದೇ ವ್ಯಕ್ತಿ /ಸಂಸ್ಥೆಗಳನ್ನು ಸಾರ್ವಜನಿಕರು ಕಂಡರೆ, ತಕ್ಷಣವೇ ಕರ್ನಾಟಕದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಉಡುಪಿ ಅಥವಾ ಜಿಲ್ಲಾಧಿಕಾರಿ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಉಡುಪಿ ಅಥವಾ ಬೆಂಗಳೂರು ವಿಜಿನಾಪುರದ ರಾಮಮೂರ್ತಿ ನಗರ ಬಳಿ ಇರುವ ಕೆವಿಐಸಿ ಕಚೇರಿಯ ಗಮನಕ್ಕೆ ತರಬಹುದು ಅಥವಾ ರಾಜ್ಯ ಕಚೇರಿ, ಕೆವಿಐಸಿ,ದೂರವಾಣಿನಗರ, ಬೆಂಗಳೂರು (ದೂರವಾಣಿ:080-25665884) ಇ.ಮೇಲ್:kvicblr@gmail.com ಅಥವಾ ಜಿ.ರಾಮಚಂದನ್, ಜಿಲ್ಲಾ ಸಂಯೋಜಕರು, ಪಿಎಂಇಜಿಪಿ-ಕೆವಿಐಸಿ ಉಡುಪಿ (ಮೊ:9846869369) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News