ವೃದ್ಧ ನಾಪತ್ತೆ

Update: 2019-07-18 15:22 GMT

ಉಡುಪಿ, ಜು.18: ಉಡುಪಿ ಪಿಪಿಸಿ ರೋಡ್ ಸುನಂದಾ ದೇವದಾಸ್ ಟವರ್ಸ್‌ನ ನಿವಾಸಿ ಪಾಂಡುರಂಗ ನರಸಿಂಹ ಪೈ (70 ವರ್ಷ) ಎಂಬವರು ಜು.16ರಂದು ಮನೆಯಿಂದ ಹೊರಗೆ ಹೋದವು ವಾಪಸುಬಾರದೇ ಕಾಣೆಯಾಗಿದ್ದಾರೆ.

ಐದು ಅಡಿ 7 ಇಂಚು ಎತ್ತರವಿದ್ದು, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕನ್ನಡ, ಕೊಂಕಣಿ, ತುಳು ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News