737 ಮ್ಯಾಕ್ಸ್ ವಿಮಾನಗಳ ಸಂತ್ರಸ್ತ ಕುಟುಂಬಗಳಿಗೆ 50 ಮಿಲಿಯ ಡಾ. ಪರಿಹಾರ: ಬೋಯಿಂಗ್ ಘೋಷಣೆ

Update: 2019-07-18 15:55 GMT

ವಾಶಿಂಗ್ಟನ್, ಜು. 18: ತನ್ನ ಪತನಗೊಂಡಿರುವ ಎರಡು 737 ಮ್ಯಾಕ್ಸ್ ವಿಮಾನಗಳ ಪ್ರಯಾಣಿಕರ ಕುಟುಂಬಗಳಿಗೆ 50 ಮಿಲಿಯ ಡಾಲರ್ (ಸುಮಾರು 344 ಕೋಟಿ ರೂಪಾಯಿ) ಪರಿಹಾರ ನೀಡುವುದಾಗಿ ಅಮೆರಿಕದ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್ ಬುಧವಾರ ಹೇಳಿದೆ.

ಪರಿಹಾರ ವಿತರಣೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಅಮೆರಿಕದ ಪರಿಹಾರ ಪರಿಣತ ಕೆನ್ ಫೀನ್‌ಬರ್ಗ್‌ರನ್ನು ನೇಮಿಸಿಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಇಥಿಯೋಪಿಯನ್ ಏರ್‌ಲೈನ್ಸ್‌ನ 737 ಮ್ಯಾಕ್ಸ್ ವಿಮಾನ ಪತನದಲ್ಲಿ ತನ್ನ ಮೂವರು ಮಕ್ಕಳು, ಪತ್ನಿ ಮತ್ತು ಅತ್ತೆಯನ್ನು ಕಳೆದುಕೊಂಡ ಪೌಲ್ ಜೊರೋಜ್ ಎಂಬವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸಾಕ್ಷ ನುಡಿಯುವುದಕ್ಕೆ ಕೆಲವೇ ನಿಮಿಷಗಳ ಮೊದಲು ಬೋಯಿಂಗ್ ಕಂಪೆನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇಂಡೋನೇಶ್ಯದ ಲಯನ್ ಏರ್ ವಾಯುಯಾನ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಅಕ್ಟೋಬರ್‌ನಲ್ಲಿ ಸಮುದ್ರದಲ್ಲಿ ಪತನಗೊಂಡಿತ್ತು ಹಾಗೂ ಇಥಿಯೋಪಿಯನ್ ಏರ್‌ಲೈನ್ಸ್‌ನ ವಿಮಾನವು ಮಾರ್ಚ್‌ನಲ್ಲಿ ಅಪಘಾತಕ್ಕೀಡಾಗಿತ್ತು. ಈ ಎರಡು ಅಪಘಾತಗಳಲ್ಲಿ ಒಟ್ಟು 346 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News