ಇಂದಿರಾನಗರ ಮನೆ ಕಳವು ಆರೋಪಿಗಳ ಬಂಧನ

Update: 2019-07-19 15:01 GMT

ಉಡುಪಿ, ಜು.19: ಕುಕ್ಕಿಕಟ್ಟೆ ಇಂದಿರಾನಗರದ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳನ್ನು ಎರಡೆ ದಿನಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದಿರಾ ನಗರ ನಿವಾಸಿಗಳಾದ ಮಹಮ್ಮದ್ ಫಾರೂಕ್(19) ಹಾಗೂ ಅಫ್ಜಲ್(19) ಬಂಧಿತ ಆರೋಪಿಗಳು. ಇಂದಿರಾನಗರ 8ನೆ ಕ್ರಾಸ್‌ನಲ್ಲಿರುವ ಬಾಲಕೃಷ್ಣ ಎಂಬವರ ಮನೆಗೆ ಜು.16 ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು 2,45,000ರೂ. ಮೌಲ್ಯದ ನಗ ನಗದು ಕಳವು ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದೆ. ಇವರಿಂದ ಒಟ್ಟು 66.850 ಗ್ರಾಂ ಚಿನ್ನಾಭರಣ ಹಾಗೂ ಮೂರು ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 1,69,800ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಅನಂತಪದ್ಮನಾಭ ಕೆ.ವಿ, ಜಿಲ್ಲಾ ಪೊಲೀಸ್ ಕಛೇರಿಯ ಎಎಸ್ಸೈ ಅಚ್ಚುತ, ನಗರ ಠಾಣೆಯ ಎಎಸ್ಸೈಗಳಾದ ಗೋಪಾಲಕೃಷ್ಣ ಜೋಗಿ, ವಿಜಯ, ಸಿಬ್ಬಂದಿಯವರಾದ ಜೀವನ್ ಕುಮಾರ್, ಲೋಕೇಶ್, ಬಾಲಕೃಷ್ಣ, ಮಾಲತಿ, ಇಮ್ರಾನ್, ಸಂಗನ ಗೌಡ, ಸಂತೋಷ್ ರಾತೋಡ್, ಕಿರಣ್, ಚಾಲಕರು ಗಳಾದ ರವೀಂದ್ರ, ಪ್ರಸಾದ್ ಸಹಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News