ಕಾಪು ತಾಲ್ಲೂಕಿನಲ್ಲಿ ಭಾರೀ ಮಳೆ: ತೊಟ್ಟಂನಲ್ಲಿ ಕಡಲ್ಕೊರೆತ ಭೀತಿ

Update: 2019-07-19 15:24 GMT

ಕಾಪು: ಶುಕ್ರವಾರ ಬೆಳಗ್ಗಿನಿಂದ ಕಾಪು ಪರಿಸರದಲ್ಲಿ ಭಾರೀ ಮಳೆಯಾಗಿದೆ. ಉದ್ಯಾವರದಲ್ಲಿ ಮರ ಉರುಳಿದ್ದು, ಹಲವಡೆ ಕಡಕೊರೆತ ಭೀತಿ ಉಂಟಾಗಿದೆ. 

ಉದ್ಯಾವರದ ಗುಡ್ಡೆ ಅಂಗಡಿ ಬಸ್ಸು ನಿಲ್ದಾಣದ ಬಳಿ ಬಾರಿ ಗಾತ್ರದ ಮರವೊಂದು ಬೆಳಗಿನ ಜಾವ ಭಾರೀ ಗಾತ್ರದ ಮರವೊಂದು ಉರಳಿಬಿದ್ದಿದೆ. ಇದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತ ಮತ್ತು ಅರಣ್ಯ ಇಲಾಖೆಯ ಸಿಬಂದಿ ಸ್ಥಳಕ್ಕೆ ತೆರಳಿ ಮರವನ್ನು ರಸ್ತೆಯಿಂದ ತೆರವುಗೊಳಿಸಿದರು. ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರು ಮರತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

ಕಾಪು ಪಡುಗ್ರಾಮದ ತೊಟ್ಟಂ, ಪೊಲಿಪು, ಎರ್ಮಾಳು, ಪಡುಬಿದ್ರಿ ಪರಿಸರದಲ್ಲಿ ಕಡಲಬ್ಬರ ಹೆಚ್ಚಾಗಿದೆ. ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಕಡಲ್ಕೊರೆತಕ್ಕೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. 
ಕಡಲ ಅಬ್ಬರದಿಂದ ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ನಿರ್ಮಾಣ ಹಂತದಲ್ಲಿರುವ ಬ್ಲೂಪ್ಲ್ಯಾಗ್ ಯೋಜನಾ ಪ್ರದೇಶಕ್ಕೆ ಕಡಲ ತೀರದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಣ್ಣಿನ ರಸ್ತೆ ಕೊಚ್ಚಿ ಹೋಗಿದೆ. 

ಕಾಪು ಪಡುಗ್ರಾಮದ ತೊಟ್ಟಂನ ಕಡಲ್ಕೊರೆತದ ಪ್ರದೇಶಗಳಿಗೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ಪರೀಕ್ಷಕ ಗ್ರಾಮ ಕರಣಿಕ ಶ್ರೀಕಾಂತ್, ದೇವರಾಜ್ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News