ಮೂಡುಬಿದಿರೆ: ಯುವಕ ನಾಪತ್ತೆ

Update: 2019-07-19 15:49 GMT

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ಅಬ್ದುಲ್ ಪಿ.ಕೆ. ಎಂಬವರ ಪುತ್ರ ಆಸಿಫ್ (26.ವ.) ಎಂಬಾತನು ಬುದ್ಧಿಮಾಂದ್ಯ ಯುವಕನಾಗಿದ್ದು, ದಿನಾಂಕ 9.7.2019 ರಂದು ತನ್ನ ಮನೆಯಿಂದ ಬೆಳಿಗ್ಗೆ 7 ಗಂಟೆಗೆ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಎಂದು ಆತನ ಸಹೋದರ ಮುಹಮ್ಮದ್ ಶರೀಫ್ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. 

ಕಾಣೆಯಾದ ವ್ಯಕ್ತಿಯು ಎತ್ತರ 5 ಅಡಿ, ಗೋಧಿ ಬಣ್ಣ, ಕಪ್ಪು ಕೂದಲು, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ,ಬ್ಯಾರಿ, ತುಳು, ಮಲೆಯಾಳಂ ಭಾಷೆ ಮಾತನಾಡುವವರಾಗಿದ್ದಾರೆ.  ತಿಳಿ ಕೆಂಪು ಬಣ್ಣದ ಉದ್ದ ತೋಳಿನ ಶರ್ಟ್ ಧರಿಸಿದ್ದಾರೆ. 

ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಪೊಲೀಸು ಆಯುಕ್ತರು: 0824-2220801, 2220800, ಮೂಡುಬಿದಿರೆ ಪೊಲೀಸು ಠಾಣೆ: 08258-236333 ಗೆ ಮಾಹಿತಿ ನೀಡುವಂತೆ ಪೊಲೀಸು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News