ಕರಾವಳಿಯಲ್ಲಿ 3 ದಿನ ಭಾರೀ ಮಳೆಯ ಎಚ್ಚರಿಕೆ

Update: 2019-07-19 16:37 GMT

ಉಡುಪಿ, ಜು.19: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದ ಕರಾವಳಿ ಭಾಗದಲ್ಲಿ ಜು.20ರಿಂದ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯ ಕುರಿತಂತೆ ಮುನ್ನೆಚ್ಚರಿಕೆಯನ್ನು ನೀಡಿದೆ.

ಈ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮಗಳ ಕುರಿತು ಜನತೆಗೆ ಸೂಚನೆಗಳನ್ನು ನೀಡಿದೆ.

ಮೀನುಗಾರರು, ಪ್ರವಾಸಿಗರು, ನದಿ ತೀರ ಅಥವಾ ಸಮುದ್ರಕ್ಕೆ ಇಳಿಯ ದಂತೆ ಸೂಚನೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯ ವಾಗಿ ಕೇಂದ್ರದಲ್ಲಿ ಸ್ಥಾನದಲ್ಲಿ ಇರುವಂತೆ ಹಾಗೂ ತಗ್ಗುಪ್ರದೇಶ, ಕೆರೆ, ನದಿತೀರ ಹಾಗೂ ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ಹೋಗದಂತೆ ಪಾಲಕರು ಜಾಗೃತೆ ವಹಿಸುವಂತೆ ಅದು ತಿಳಿಸಿದೆ.

ತುರ್ತು ಸಂದರ್ಭಗಳಲ್ಲಿ ಅಗತ್ಯ ಬಿದ್ದರೆ ಟೋಲ್‌ಫ್ರೀ ಸಂಖ್ಯೆ:1077 ಅಥವಾ ದೂರವಾಣಿ ಸಂಖ್ಯೆ:0820-2574802/2574360ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News