×
Ad

ಆರ್‌ಬಿಐ ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ಖಾತೆಯಿಂದ ಸಾವಿರಾರು ರೂ. ಲಪಟಾಯಿಸಿದ ಅನಾಮಿಕ!

Update: 2019-07-19 22:27 IST

ಮಂಗಳೂರು, ಜು.19: ಆರ್‌ಬಿಐ ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ಕ್ರೆಡಿಟ್ ಕಾರ್ಡ್ ನಂಬರ್ ಮೂಲಕ 39,999 ರೂ. ಲಪಟಾಯಿಸಿದ ಘಟನೆ ನಡೆದಿದೆ.

ವ್ಯಕ್ತಿಯೊಬ್ಬರಿಗೆ ಜು.18ರಂದು ಅನಾಮಿಕ ವ್ಯಕ್ತಿಯ ನಂಬರ್‌ನಿಂದ ಕರೆಬಂದಿದ್ದು, ತಾನು ಆರ್‌ಬಿಐ ಬ್ಯಾಂಕ್‌ನವನಾಗಿದ್ದು, ನಿಮಗೆ ಹೊಸ ಕ್ರೆಡಿಟ್ ಕಾರ್ಡ್ ನೀಡುತ್ತೇನೆ ಎಂದು ನಂಬಿಸಿದ್ದಾನೆ. ಬಳಿಕ ಹಳೆ ಕ್ರೆಡಿಟ್ ಕಾರ್ಡ್‌ನ ಎಲ್ಲ ವಿವರ ಕೇಳಿದ್ದು, ಸಿವಿವಿ ನಂಬರ್ ಕೂಡಾ ಪಡೆದುಕೊಂಡಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಕ್ರೆಡಿಟ್ ಕಾರ್ಡ್‌ನಿಂದ 39,999ರೂ. ಹಣವನ್ನು ಫೋನ್ ಮಾಡಿದ ವ್ಯಕ್ತಿ ಲಪಟಾಯಿಸಿದ್ದಾನೆ.

ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News