ಉಡುಪಿ: ಮನೆಗೆ ನುಗ್ಗಿ ಕಳವು
Update: 2019-07-19 22:41 IST
ಉಡುಪಿ, ಜು.19: ಕರಾವಳಿ ಬೈಪಾಸ್ ಬಳಿಯ ಮಹಾಕಾಳಿ ಲೇಔಟ್‌ನಲ್ಲಿ ರುವ ಮನೆಗೆ ಜು.17ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಆರ್.ವೇಣು ಎಂಬವರ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಒಳಗಡೆ ಕೈಚೀಲದಲ್ಲಿದ್ದ 20,000ರೂ. ನಗದು ಹಾಗೂ 8 ಗ್ರಾಂ ತೂಕದ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 40,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.