ಜವಾಹರ ನವೋದಯ ವಿದ್ಯಾಲಯ: 6ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

Update: 2019-07-19 17:18 GMT

ಮಂಗಳೂರು, ಜು.19: ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ವಸತಿ ಶಾಲೆಯಾದ ಮುಡಿಪು ಜವಾಹರ ನವೋದಯ ವಿದ್ಯಾಲಯದ 2020-21ನೇ ಸಾಲಿಗೆ ಆರನೇ ತರಗತಿ ಪ್ರವೇಶಾತಿಯ ಆಯ್ಕೆ ಪರೀಕ್ಷೆಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ಸರಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗು ಶಿಕ್ಷಣ ನೀಡಲಾಗುತ್ತದೆ.

ಅರ್ಹ ಅಭ್ಯರ್ಥಿಗಳು ತಮ್ಮ ಪಾಲಕ/ಪೋಷಕ ಜೊತೆಗೆ ವಿದ್ಯಾರ್ಥಿಯ 5ನೇ ತರಗತಿ ಓದುತ್ತಿರುವ ಶಾಲೆಯ ಪ್ರಮಾಣಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಂದ ಸಹಿ ಮತ್ತು ಮೊಹರು ಪಡೆದು ಯಾವುದೇ ಇಂಟರ್‌ನೆಟ್ ಕೇಂದ್ರಗಳ ಮೂಲಕ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ನವೋದಯ ವಿದ್ಯಾಲಯ ಸಮಿತಿಯ ವೆಬ್‌ಸೈಟ್ www.nvshq.org / www.jnvmangalore.gov.inನ್ನು ಮತ್ತು ಪ್ರಾಂಶುಪಾಲರು, ಜವಾಹರ ನವೋದಯ ವಿದ್ಯಾಲಯ, ಮುಡಿಪು ಇವರನ್ನು ಸಂಪರ್ಕಿಸಬಹುದು. ದೂ.ಸಂ.: 08255-261300ನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ಸೆಪ್ಟಂಬರ್ 15 ಕೊನೆಯ ದಿನವಾಗಿದೆ. 2020ರ ಜನೇವರಿ 11ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಜವಾಹರ ನವೋದಯ ವಿದ್ಯಾಲಯ, ಮುಡಿಪು ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News