ಕಾಪು: ನಾಲ್ವರು ಅಂತರಾಜ್ಯ ವಾಹನ ಚೋರರ ಬಂಧನ

Update: 2019-07-21 14:40 GMT

ಕಾಪು: ಕಾಪು ವೃತ್ತ ಪೊಲೀಸರ ತಂಡ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ಅಂತಾರಾಜ್ಯ ವಾಹನ ಚೋರರನ್ನು ಬಂಧಿಸಿದ್ದಾರೆ.  

ಶಿವಮೊಗ್ಗ ಮೂಲದ ಸಯ್ಯದ್ ಮೆಹಬೂಬ್ ಪಾಷ (57), ಸಯ್ಯದ್ ಮಜರ್ ಪಾಷಾ (23), ಚಿಕ್ಕಮಗಳೂರು ಎನ್.ಆರ್. ಪುರ ನಿವಾಸಿ ಎಲಿಯಾಸ್ ಯಾನೆ ಬಾಬು (58) ಮತ್ತು  ತಮಿಳುನಾಡಿನ ಜಿಯಾವುಲ್ ಹಕ್ (37)  ಬಂಧಿತರು.

ಬಂಧಿತರಿಂದ ಮಹೀಂದ್ರ ಪಿಕಪ್ ಮತ್ತು ಇಂಡಿಕಾ ಕಾರನ್ನು ಪೊಲೀಸರು  ವಶಪಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಮತ್ತೆ ಪೊಲೀಸರ ವಶಕ್ಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News